ಬಂಟ್ವಾಳ: ಸರ್ಕಾರದ ನಿರ್ದೇಶನದಂತೆ ಮಾಣಿ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಆಶ್ರಯದಲ್ಲಿ, ಪಿ.ಎಚ್.ಸಿ. ವ್ಯಾಪ್ತಿಯ ಹನ್ನೊಂದು ಗ್ರಾಮಗಳ ವಿಕಲಚೇತನರ ವಿಶೇಷ ಕೋವಿಡ್ ಲಸಿಕಾ ಶಿಬಿರ ವೈದ್ಯಾಧಿಕಾರಿ ಡಾ.ಶಶಿಕಲಾರವರ ನೇತೃತ್ವದಲ್ಲಿ ಮಾಣಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಿತು.140ಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡರು. ಟಾಸ್ಕ್ ಫೋರ್ಸ್ ಸಮಿತಿ ಸಹಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಸದಸ್ಯರುಗಳಾದ ತನಿಯಪ್ಪ ಪೂಜಾರಿ, ಮುತ್ತಪ್ಪ ಸಾಲಿಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾಣಿ, ಮುಖ್ಯೋಪಾಧ್ಯಾಯಿನಿ ಚಂದ್ರಾವತಿ, ಸಹ ಶಿಕ್ಷಕಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಮೇಲ್ವಿಚಾರಕಿ ರೂಪಕಲಾ, ಆರೋಗ್ಯ ಸಹಾಯಕಿಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment on "ಮಾಣಿ ಸುತ್ತಮುತ್ತಲಿನ 11 ಗ್ರಾಮಗಳಲ್ಲಿ ವಿಕಲಚೇತನರಿಗೆ ಲಸಿಕೆ ಶಿಬಿರ"