190 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ, ಚರಂಡಿ ಅಭಿವೃದ್ಧಿ ಕಾರ್ಯ





ಬಂಟ್ವಾಳ: ಬಿ.ಸಿ.ರೋಡ್ ನಿಂದ ಕೈಕುಂಜೆವರೆಗಿನ ರಸ್ತೆಯಲ್ಲಿ 190 ಮೀಟರ್ ವರೆಗೆ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಯು.ರಾಜೇಶ್ ನಾಯ್ಕ್ ಶಿಲಾನ್ಯಾಸವನ್ನು ಬುಧವಾರ ನೆರವೇರಿಸಿದರು.
190 ಮೀಟರ್ ರಸ್ತೆ ಅಭಿವೃದ್ಧಿಗೊಳ್ಳಲಿದೆ. 10ರಿಂದ 11 ಮೀಟರ್ ಅಗಲಕ್ಕೆ ಕಾಂಕ್ರೀಟ್ ಹಾಕುವ ಕಾರ್ಯ ನಡೆಯಲಿದೆ. 190 ಮೀಟರ್ ಉದ್ದಕ್ಕೆ ಕಾಂಕ್ರೀಟ್ ಚರಂಡಿ ನಿರ್ಮಾಣವನ್ನೂ ಮಾಡಲಾಗುತ್ತದೆ. 1.5 ಮೀಟರ್ ಅಗಲದ ಎರಡು ಅಡ್ಡ ಮೋರಿಗಳ ನಿರ್ಮಾಣವೂ ಇಲ್ಲಿ ಆಗಲಿದೆ, ಹೈಮಾಸ್ಟ್ ದೀಪಗಳನ್ನು ಅಳವಡಿಸುವುದು ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಒದಗಿಸಲು 2 ಕೋಟಿ ರೂ ಮಂಜೂರುಗೊಂಡಿದ್ದು, ಇದರನ್ವಯ ಕಾಮಗಾರಿ ನಡೆಯಲಿದೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಸೌಂದರ್ಯವೃದ್ಧಿ ಕಾಮಗಾರಿ ವಿಳಂಬವಾಗಿದ್ದು, ಇನ್ನು ಮುಂದುವರಿಯಲಿದೆ ಎಂದರು. ಸ್ಥಳೀಯ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಈ ಸಂದರ್ಭ ಗುದ್ದಲಿ ಪೂಜೆ ನೆರವೇರಿಸಿದರು. ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ತಾಪಂ ಇಒ ರಾಜಣ್ಣ, ಪಿಡಬ್ಲ್ಯುಡಿ ಎಇಇ ಷಣ್ಮುಖಂ, ಗುತ್ತಿಗೆದಾರರಾದ ಮೊಗೆರೋಡಿ ಸುಧಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಬಿಜೆಪಿ ಪ್ರಮುಖರಾದ ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಕಾಶ್ ಅಂಚನ್, ರಾಮದಾಸ ಬಂಟ್ವಾಳ, ಸುದರ್ಶನ ಬಜ, ರಮನಾಥ ರಾಯಿ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಭಾರತಿ ಚೌಟ, ನಳಿನಿ ಬಿ.ಶೆಟ್ಟಿ, ಕೇಶವ ದೈಪಲ, ಹರಿಪ್ರಸಾದ್, ಯಶೋಧರ ಕರ್ಬೆಟ್ಟು, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಸೀತಾರಾಮ ಪೂಜಾರಿ, ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಅಮೃತ್ ಕುಮಾರ್ ಸಹಿತ ಪ್ರಮುಖ ನಾಯಕರು, ಪುರಸಭಾ ಸದಸ್ಯರು, ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಅರ್ಚಕ ಮಹೇಶ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

Be the first to comment on "2 ಕೋಟಿ ರೂ ಮೊತ್ತದ ಕಾಮಗಾರಿಗೆ ಬಿ.ಸಿ.ರೋಡಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರಿಂದ ಶಿಲಾನ್ಯಾಸ"