ಬಂಟ್ವಾಳ: ವಿಧಾನಸಭೆಯ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯುದ್ದಕ್ಕೂ ಸಮರ್ಪಕವಾಗಿ ಸರ್ಕಾರಿ ಬಸ್ಸುಗಳು ಓಡಾಟ ಆರಂಭಿಸಿ, ಸಮಯಕ್ಕೆ ಸರಿಯಾಗಿ ಬಂದರೆ ಘಟಕಕ್ಕೂ ಲಾಭ, ಸಾರ್ವಜನಿಕರಿಗೂ ಉಪಕಾರವಾದೀತು ಎಂಬ ವಿಚಾರ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ. ಅದಾಲತ್ ನಲ್ಲಿ ಪ್ರಸ್ತಾಪಗೊಂಡಿತು.
ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಸಾರ್ವಜನಿಕರ ಬೇಡಿಕೆಗಳಿಗೆ ನೇರವಾಗಿ ಸ್ಪಂದಿಸಲು ಅಧಿಕಾರಿಗಳ ಮತ್ತು ಸಾರ್ವಜನಿಕರ ಸಂಪರ್ಕಕ್ಕಾಗಿ ಮಾಡಿದ ಈ ಅದಾಲತ್ ಉತ್ತಮವಾಗಿ ಮೂಡಿಬಂದಿದ್ದು, ಜನರಿಗೆ ಅತ್ಯಗತ್ಯವಿರುವ ಕಡೆಗಳಲ್ಲಿ ಬಸ್ ಗಳನ್ನು ಒದಗಿಸುವ ಹಾಗೂ ವ್ಯವಸ್ಥಿತವಾಗಿ ಜನಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವ ಕುರಿತು ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಎಸ್.ಆರ್, ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ಎಂ.ತುಂಗಪ್ಪ ಬಂಗೇರ, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ತಾಪಂ ಸದಸ್ಯರಾದ ಗೀತಾ ಚಂದ್ರಶೇಖರ್, ಪ್ರಭಾಕರ ಪ್ರಭು ಕರ್ಪೆ ಯಶವಂತ ಪೊಳಲಿ, ಕೆಎಸ್ಸಾರ್ಟಿಸಿ ವಿಭಾಗೀಯ ಸಂಚಲನಾಧಿಕಾರಿಗಳಾದ ಮುರಳೀಧರ ಆಚಾರ್ಯ, ಎಚ್.ಆರ್.ಕಮಲಕುಮಾರ್, ಡಿಪೊ ಮೆನೇಜರ್ ಗಳಾದ ದಿವಾಕರ ಎಚ್, ರಮ್ಯಾ ಕೆ.ಎಂ, ಸಹಾಯಕ ಸಂಚಲನಾ ವ್ಯವಸ್ಥಾಪಕರಾದ ನಿರ್ಮಲಾ, ಪುಷ್ಪಲತಾ ಉಪಸ್ಥಿತರಿದ್ದರು. ಬಿ.ಸಿ.ರೋಡ್ ಡಿಪೋ ಮೆನೇಜರ್ ಶ್ರೀಷ ಭಟ್ ವಂದಿಸಿದರು. ಕೆಎಸ್ಸಾರ್ಟಿಸಿಯ ರಮೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಮುಖರಾದ ಜಿನರಾಜ ಆರಿಗ, ದೇವದಾಸ ಶೆಟ್ಟಿ ಪಾಲ್ತಾಜೆ, ಧನಂಜಯ ಶೆಟ್ಟಿ ಸರಪಾಡಿ, ಅಶೋಕ ಶೆಟ್ಟಿ ಸರಪಾಡಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಪುರುಷೋತ್ತಮ ಪೂಜಾರಿ, ಅರವಿಂದ ನಾಯಕ್, ದೇವಿ ಪ್ರಸಾದ್, ಡೊಂಬಯ ಅರಳ, ಪ್ರೇಮನಾಥ ಶೆಟ್ಟಿ, ಆನಂದ ಶಂಭೂರು ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.
Be the first to comment on "ಬಂಟ್ವಾಳ ಕ್ಷೇತ್ರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಖ್ಯೆ ಹೆಚ್ಚಳಕ್ಕೆ ಅದಾಲತ್ ನಲ್ಲಿ ಬೇಡಿಕೆ"