ಉಡುಪಿ: ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2017ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಡಾ. ವೈ.ನವೀನ್ ಭಟ್ ನೇಮಕಗೊಂಡಿದ್ದಾರೆ.
ಅವರು ಈ ಹಿಂದೆ ಬಂಟ್ವಾಳ ಪಿಡಬ್ಲ್ಯುಡಿ ಎಇಇ ಆಗಿದ್ದ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿರುವ ಉಮೇಶ್ ಭಟ್ ಅವರ ಪುತ್ರ.ತಾಯಿ ವಿಜಯಲಕ್ಷ್ಮಿ. ಸಹೋದರಿ ನವ್ಯಾ ಎಂ.ಡಿ. ವ್ಯಾಸಂಗ ಮಾಡುತ್ತಿದ್ದಾರೆ.
ಐಎಎಸ್ ತೇರ್ಗಡೆಯಾದ ಬಳಿಕ ಡಾ. ನವೀನ್ ಭಟ್, ದೆಹಲಿಯಲ್ಲಿ ಮೂರು ತಿಂಗಳ ತರಬೇತಿಯನ್ನು ಆರೋಗ್ಯ ಇಲಾಖೆಯಲ್ಲಿ ಪಡೆದರು. ಬಳಿಕ ಸಹಾಯಕ ಕಮೀಷನರ್ ಆಗಿ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ಪತ್ನಿಯೂ ಐ.ಆರ್.ಎಸ್. ಆಗಿದ್ದು, ಶಿವಮೊಗ್ಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಡಾ. ನವೀನ್ ಭಟ್ ಐಎಎಸ್ ಅನ್ನು 37ನೇ ಕ್ರಮಾಂಕದಲ್ಲಿ ತೇರ್ಗಡೆ ಹೊಂದಿರುತ್ತಾರೆ. (ಕರ್ನಾಟಕದಲ್ಲಿ 3ನೇ ಸ್ಥಾನ) ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೂಡಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬಂಟ್ವಾಳ ತಾಲೂಕು ಮೊಡಂಕಾಪು ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದ್ದು ಪ್ರೌಢ ಶಾಲೆ ಮತ್ತು ಪಿಯೂಸಿ ವಿದ್ಯಾಭ್ಯಾಸವನ್ನು ಅಳಿಕೆ ಶ್ರೀಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ನಡೆಸಿದ್ದರು. 2009ನೇ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದರು. ಎಂಬಿಬಿಎಸ್ ಅನ್ನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮಾಡಿದ್ದರು.
Be the first to comment on "ಉಡುಪಿ ಜಿಪಂ ಸಿಇಒ ಆಗಿ ಡಾ. ನವೀನ್ ಭಟ್ ನೇಮಕ"