ಪರಮಪ್ರಸಾದ ಕಾರ್ಯಕ್ರಮದಿಂದ ಜೀವನೋತ್ಸಾಹ ವೃದ್ಧಿ

ಜಾಹೀರಾತು

ಬಂಟ್ವಾಳ: ಪರಮ ಪ್ರಸಾದ  ಎನ್ನುವುದು ಕ್ರೈಸ್ತರ ಬದುಕಿನ ಅತಿ ಮುಖ್ಯ ಸಂಸ್ಕಾರಗಳಲ್ಲಿ ಒಂದಾಗಿದ್ದು, ಇದು ಜೀವನದ‌ ಉತ್ಸಾಹ ಹೆಚ್ಚಿಸಲಿ ಎಂದು ಪಕ್ಷಿಕೆರೆ ಧರ್ಮ ಕೇಂದ್ರದ ಗುರುಗಳಾದ ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ ಹೇಳಿದರು.

ಸೂರಿಕುಮೇರುನಲ್ಲಿರುವ  ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಗುರುವಾರ ನಡೆದ ಪರಮ ಪ್ರಸಾದದ ಕಾರ್ಯಕ್ರಮ ದಲ್ಲಿ  ಅಶೀರ್ವಚನ ನೀಡಿ, ಮಕ್ಕಳಿಗೂ ಹಾಗೂ ಮಕ್ಕಳ ಹೆತ್ತವರಿಗೂ ಶುಭ ಹಾರೈಸಿದರು.

ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು.

ಜಾಹೀರಾತು

ಮಕ್ಕಳಾದ ಅಶ್ಮಿತಾ ಸುವಾರಿಸ್, ಕ್ಲೆನೆತ್ ಸಿಕ್ವೇರಾ, ರೀಷಲ್ ಡೇಸಾ ಹಾಗೂ ರಿಶೋನ್ ಮಾರ್ಟಿಸ್ ರವರಿಗೆ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ರವರು ಪರಮ ಪ್ರಸಾದವನ್ನು ನೀಡಿದರು.

ಕೋವಿಡ್ 19 ರ  ಹಿನ್ನೆಲೆಯಲ್ಲಿ ಅತ್ಯಂತ ಸರಳ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯಿತು.   ಒಂದು ಮಗುವಿನ ಇಪ್ಪತ್ತೈದು ಜನರಿಗೆ ಮಾತ್ರ ಪೂಜೆಯಲ್ಲಿ ಭಾಗವಹಿಸಲು

ಅವಕಾಶವನ್ನು ನೀಡಲಾಗಿತ್ತು. ಚರ್ಚ್ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಮತ್ತು ಸಿಸ್ಟರ್ ಲೊವಿಟ ಉಪಸ್ಥಿತರಿದ್ದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಪರಮಪ್ರಸಾದ ಕಾರ್ಯಕ್ರಮದಿಂದ ಜೀವನೋತ್ಸಾಹ ವೃದ್ಧಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*