ಶಿಕ್ಷಕರ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ ಸನ್ಮಾನ

ಬಂಟ್ವಾಳ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆ ಶಿಕ್ಷಕರಾಗಿ ನಿವೃತ್ತ ಜೀವನ ನಡೆಸುತ್ತಿರುವ ಪದ್ಮನಾಭ ರಾವ್ ಅವರನ್ನು ಅಧ್ಯಕ್ಷ ಕೃಷ್ಣಶ್ಯಾಮ್ ಸನ್ಮಾನಿಸಿದರು. ಸದಸ್ಯರಾದ ಜಯಂತ ಶೆಟ್ಟಿ, ಲಕ್ಷ್ಮಣ ಕುಲಾಲ್ ಅಗ್ರಬೈಲ್ ಇದ್ದರು.