ಬಂಟ್ವಾಳ: ಬಿ.ಸಿ.ರೋಡಿನ ನ್ಯಾಯವಾದಿ ಶ್ರೀಧರ ಪೈ ಅವರನ್ನು ಬಂಟ್ವಾಳ ನಗರ ಠಾಣೆಯಲ್ಲಿ ರಚಿಸಲಾದ ಕಾನೂನು ಸೇವೆಗಳ ಕ್ಲಿನಿಕ್ ನಲ್ಲಿ ಉಚಿತ ಕಾನೂನು ನೆರವನ್ನು ನೀಡಲು ನೇಮಕಗೊಳಿಸಲಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಇವರು ಬಂಟ್ವಾಳ ನ್ಯಾಯಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಪೊಲೀಸ್ ಠಾಣೆಗಳ ಸಂಪರ್ಕದಲ್ಲಿದ್ದು,ಬಂದನ ಪೂರ್ವ,ಬಂಧನ ಮತ್ತು ರಿಮಾಂಡ್ ಹಂತದಲ್ಲಿ ಉಚಿತ ಕಾನೂನು ಸಲಹೆಯನ್ನು ನೀಡಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದ್ದು,ಸಾರ್ವಜನಿಕರು ಇವರ ಸೇವೆಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾನೂನು ಸೇವೆ ಕ್ಲಿನಿಕ್ ಗೆ ನ್ಯಾಯವಾದಿ ಶ್ರೀಧರ ಪೈ ನೇಮಕ"