ಕೊರೊನಾ ಪ್ರಕರಣಗಳು ಪತ್ತೆಯಾಗಲಾರಂಭಿಸಿದ ನಂತರದ ದೊಡ್ಡ ಆಘಾತ ದಕ್ಷಿಣ ಕನ್ನಡ ಜಿಲ್ಲೆಗೆ ಇವತ್ತು ಆಗಿದೆ. ಇಂದು ಒಂದೇ ದಿನ 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 3 ಮಂದಿ ಸಾವನ್ನಪ್ಪಿದ್ದಾರೆ. ಮಂಗಳೂರು ತಾಲೂಕು ನಿವಾಸಿ ಪುರುಷ ಮತ್ತು ಮಹಿಳೆ ಮತ್ತು ಬಂಟ್ವಾಳ ತಾಲೂಕಿನ ಮಹಿಳೆ ಸಾವನ್ನಪ್ಪಿದವರು.
ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿದೆ. ಇಂದು 6 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು 377 ಮಂದಿಯ ಗಂಟಲು ದ್ರವ ಮಾದರಿ ಕಳುಹಿಸಲಾಗಿದೆ. ಒಟ್ಟು 480 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಲು ಬಾಕಿ ಇದೆ. ಇಂದು ಗೊತ್ತಾದ 178 ಪರೀಕ್ಷಾ ವರದಿಗಳಲ್ಲಿ 97 ಪಾಸಿಟಿವ್, 81 ನೆಗೆಟಿವ್ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 673 ಮಂದಿಗೆ ಕೊರೊನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಇವರಲ್ಲಿ 10 ಅನ್ಯರಾಜ್ಯ, ಜಿಲ್ಲೆಯವರಾಗಿದ್ದು, ಜಿಲ್ಲೆಯವರದ್ದೇ ಆದ 663 ಕೇಸ್ ಗಳಿವೆ. 13 ಮಂದಿ ಸಾವನ್ನಪ್ಪಿದ್ದರೆ, 422 ಮಂದಿ ಗುಣಮುಖರಾಗಿದ್ದಾರೆ. 238 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Be the first to comment on "DAKSHINA KANNADA: ಒಂದೇ ದಿನ 97 ಮಂದಿಗೆ ಕೊರೊನಾ ಸೋಂಕು, 3 ಸಾವು"