- ಮಾಸ್ಕ್ ಧರಿಸಿ, ಕೊರೊನಾ ವಿರುದ್ಧ ಜಾಗೃತರಾಗಿರಿ
ಗುರುವಾರ ಮುಖವಸ್ತ್ರ ದಿನ. ಮಾಸ್ಕ್ ಧರಿಸುವುದು ಈಗ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಸ್ಕ್ ಬಳಕೆ ಜಾಗೃತಿ ಮೂಡಿಸಲು ಈ ದಿನ ವಿಶೇಷ ಕಾರ್ಯಕ್ರಮ. ಬಂಟ್ವಾಳದಲ್ಲೂ ಈ ಜಾಗೃತಿ ಅಂದಿನಿಂದಲೇ ಆರಂಭವಾಗಿದೆ. ಬಿ.ಸಿ.ರೋಡಿನ ಅಪೂರ್ವ ಜ್ಯುವೆಲರ್ಸ್ ಮಾಲೀಕ ಸುನೀಲ್ ಅವರು ಮಾಸ್ಕ್ ಬಳಕೆಯ ಕುರಿತು ಗ್ರಾಹಕರಿಗೆ ಆಗಾಗ್ಗೆ ಸಂದೇಶಗಳ ಮೂಲಕ ನೀಡುತ್ತಲೇ ಇರುತ್ತಾರೆ. ಬಿ.ಸಿ.ರೋಡಿನ ಇನ್ ಗ್ಯಾಲರಿಯ ಆಲ್ವಿನ್ ಅವರೂ ಇದೇ ಹಾದಿಯಲ್ಲಿದ್ದಾರೆ.
ಅಪೂರ್ವ ಜ್ಯುವೆಲರ್ಸ್ ತನ್ನ ಸಂದೇಶದಲ್ಲಿಯೇ ಮಾಸ್ಕ್ ಧರಿಸಿದ ಚಿತ್ರವನ್ನ ಪ್ರಕಟಿಸಿ ಗಮನ ಸೆಳೆದಿದೆ. ಆಲ್ವಿನ್ ಅವರು ಮಾಸ್ಕ್ ರಚಿಸುವ ಮೂಲಕ ಅದರಲ್ಲಿ ವೈವಿಧ್ಯಗಳನ್ನು ಒದಗಿಸಿದ್ದಾರೆ.
ಆಲ್ವಿನ್ ಡಿಸೋಜ ನವನವೀನ ಮಾದರಿಯ ಇನ್ವಿಟೇಶನ್ ಗಳನ್ನು ಮಾರುತ್ತಾರೆ. ಇನ್ವಿಟೇಶನ್ ಗಳ ಗ್ಯಾಲರಿಯೇ ಇವರಲ್ಲಿದೆ. ಕೊರೊನಾ ಆವರಿಸಿದ ಬಳಿಕ ಎಲ್ಲ ಉದ್ಯಮಗಳಿಗೆ ಆದ ಹೊಡೆತದ ಪರಿಣಾಮವನ್ನು ಇವರೂ ಅನುಭವಿಸಿದ್ದಾರೆ. ಮದುವೆ, ಹುಟ್ಟುಹಬ್ಬ, ಸೀಮಂತ ಹೀಗೆ ನಾನಾ ಬಗೆಯ ಇನ್ವಿಟೇಶನ್ ಗಳನ್ನು ತಯಾರಿಸಬೇಕಾದರೆ, ಆ ಕಾರ್ಯಕ್ರಮಗಳು ನಡೆಯಬೇಕಲ್ಲ, ಈ ವೇಳೆ ಧೃತಿಗೆಡದ ಆಲ್ವಿನ್ ತನ್ನ ಸ್ನೇಹಿತರೊಂದಿಗೆ ಮಾಸ್ಕ್ ತಯಾರಿಯನ್ನು ಆರಂಭಿಸಿದರು. ಕೇವಲ ಮಾಸ್ಕ್ ಧರಿಸಿದರೆ ಸಾಲದು, ಇನ್ನೊಬ್ಬರಿಗೂ ಅದರ ಮೂಲಕ ಜಾಗೃತಿ ಮೂಡಿಸಬೇಕು ಎಂಬ ಚಿಂತನೆಯೊಂದಿಗೆ ಜಾಗೃತಿ ಸಂದೇಶಗಳನ್ನು ಪ್ರತಿ ಮಾಸ್ಕ್ ಗಳಲ್ಲಿ ಬಿತ್ತರಿಸಿದ್ದಾರೆ. ಭಯ ಬೇಡ, ಎಚ್ಚರವಿರಲಿ ಎಂಬುದು ಇವರ ಮೂಲ ಸಂದೇಶ.
Be the first to comment on "ಮಾಸ್ಕ್ ನಲ್ಲಿ ಸಂದೇಶ, ಮುಖವಸ್ತ್ರ ಧರಿಸುವ ಮೂಲಕ ಪ್ರಸಾರ – ಭಯ ಬೇಡ, ಎಚ್ಚರವಿರಲಿ"