ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಆಧರಿಸಿ ಕಳೆದ 28 ದಿನಗಳಲ್ಲಿ ಯಾವುದೇ ಕೊರೊನಾ ಕೇಸ್ ಕಂಡುಬಾರದ ಹಿನ್ನೆಲೆಯಲ್ಲಿ ಹಾಗೂ ಪ್ರೈಮರಿ ಮತ್ತು ಸೆಕೆಂಡರಿ ಕಾಂಟಾಕ್ಟ್ ಗಳು ಹೋಂ ಕ್ವಾರಂಟೈನ್ ಮುಗಿಸಿದ ಕಾರಣ ಬಂಟ್ವಾಳ ತಾಲೂಕಿನ ಸಜೀಪನಡು, ಬೆಳ್ತಂಗಡಿ ತಾಲೂಕಿನ ಕಾಯರ ದ ಜನತಾ ಕಾಲೊನಿ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ವೀಗ ಸೀಲ್ ಡೌನ್ ಮುಕ್ತವಾಗಿದೆ. ಇದು ಕಂಟೈನ್ಮೆಂಟ್ ವಲಯ ಎಂಬ ಹಣೆಪಟ್ಟಿಯಿಂದ ಹೊರಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉಳಿದಿರುವ 8 ಕಂಟೈನ್ಮೆಂಟ್ ವಲಯಗಳು ಇವು. ಸಂಪ್ಯ – ಪುತ್ತೂರು. ತುಂಬೆ – ಬಂಟ್ವಾಳ, ತೊಕ್ಕೊಟ್ಟು–ಮಂಗಳೂರು, ಉಪ್ಪಿನಂಗಡಿ – ಪುತ್ತೂರು, ಬಿ.ಕಸ್ಬಾ ಬಂಟ್ವಾಳ –ಬಂಟ್ವಾಳ, ಫಸ್ಟ್ ನ್ಯೂರೊ ಆಸ್ಪತ್ರೆ – ಮಂಗಳೂರು, ನರಿಕೊಂಬು ಗ್ರಾಮದ ನಾಯಿಲ – ಬಂಟ್ವಾಳ, ಕಕ್ಕೆಬೆಟ್ಟು ಪದವು – ಮಂಗಳೂರು.
Be the first to comment on "ಬಂಟ್ವಾಳದ ಸಜೀಪನಡು ಸಹಿತ ಮೂರು ಪ್ರದೇಶಗಳೀಗ ಕಂಟೈನ್ಮೆಂಟ್ ವಲಯವಲ್ಲ"