ಬಂಟ್ವಾಳ ಪೇಟೆ, ನಾಯಿಲದಲ್ಲೀಗ ದಿಗ್ಬಂಧನಾ ಪ್ರದೇಶ

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿಯ 47 ವರ್ಷದ ಮಹಿಳೆಯೊಬ್ಬರಿಗೆ ಭಾನುವಾರ ಕೊರೊನಾ ಸೋಂಕು ಇರುವುದು ದೃಢಪಟ್ಟ ಮೇಲೆ ಅವರು ವಾಸವಿದ್ದ ಮನೆಯ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದೆ. ಇದೀಗ ಬಂಟ್ವಾಳ ತಾಲೂಕಿನ ಮೂರು ಕಡೆಗಳಲ್ಲಿ ಕಂಟೈನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗಿದೆ. ಬಂಟ್ವಾಳ ಕಸ್ಬಾದ ಬಂಟ್ವಾಳ ಪೇಟೆ, ನರಿಕೊಂಬು ಗ್ರಾಮದ ನಾಯ್ಲ ಮತ್ತು ತುಂಬೆ ಗ್ರಾಮದ ಆಯ್ದ ಪ್ರದೇಶಗಳು.

ಜಾಹೀರಾತು

ಬಂಟ್ವಾಳ ಪೇಟೆಯ ನಾಲ್ಕು ಪ್ರಕರಣಗಳು ಇನ್ನೂ ಹಸಿರಾಗಿರುವಂತೆಯೇ ಪಕ್ಕದಲ್ಲೇ ಇರುವ ನರಿಕೊಂಬು ಗ್ರಾಮದ ಮಹಿಳೆಗೆ ಕೋವಿಡ್ ಸೋಂಕು ಬಂದಿರುವುದು ಇಡೀ ಗ್ರಾಮಕ್ಕೆ ಆತಂಕ ತಂದಿದೆ. ಅವುಗಳ ಪೈಕಿ ಈಗಾಗಲೇ ಸಜಿಪನಡು ಗ್ರಾಮವೀಗ ಸೀಲ್ ಡೌನ್ ನಿಂದ ಮುಕ್ತವಾಗಿದ್ದು, ಎಲ್ಲೆಡೆ ಇರುವಂಥ ಲಾಕ್ ಡೌನ್ ಸ್ಥಿತಿ ಮುಂದುವರಿದಿದೆ.

ಬಂಟ್ವಾಳ ತಾಲೂಕಿನಲ್ಲಿ ಇದು ಏಳನೇ ಪ್ರಕರಣ. ಸಜೀಪನಡುವಿನ 10 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್ ಮೊದಲ ಪ್ರಕರಣವಾಗಿತ್ತು. ಬಳಿಕ ತುಂಬೆಯ ಯುವಕರೋರ್ವರಿಗೆ ಪಾಸಿಟಿವ್ ಬಂತು. ಈ ಸಂದರ್ಭ ಎರಡೂ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಇಬ್ಬರೂ ಗುಣಮುಖರಾಗಿ ಮನೆಗೆ ಮರಳುತ್ತಿದ್ದಂತೆ ಬಂಟ್ವಾಳ ಪೇಟೆಯ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರಿಗೆ ಕೊರೊನಾ ಇರುವುದು ದೃಢಪಟ್ಟಿತು. ಅದಾದ ಬಳಿಕ ಅವರ ಪಕ್ಕದ ಮನೆಯ ಮಹಿಳೆಗೆ ಪಾಸಿಟಿವ್ ಬಂತು. ಇದಾಗಿ ಎರಡು ದಿನಗಳಾದಾಗ ಸಾವನ್ನಪ್ಪಿದ ಮಹಿಳೆಯ ಅತ್ತೆಯೂ ಮೃತಪಟ್ಟಿದ್ದು, ಅವರಿಗೆ ಕೊರೊನಾ ಪಾಸಿಟಿವ್ ಬಂತು. ಶನಿವಾರ ಪಕ್ಕದ ಮನೆಯ ಪಾಸಿಟಿವ್ ಪ್ರಕರಣದ ಮಗಳಿಗೂ ಕೊರೊನಾ ಇರುವುದು ದೃಢಪಟ್ಟಿತು. ಒಟ್ಟಾರೆಯಾಗಿ ಬಂಟ್ವಾಳ ಪೇಟೆಯಲ್ಲಿ ನಾಲ್ವರು ಮಹಿಳೆಯರು ಕೊರೊನಾ ಸೋಂಕಿತರಾಗಿ ಇಬ್ಬರು ಸಾವನ್ನಪ್ಪಿದರೆ, ಭಾನುವಾರ ನರಿಕೊಂಬು ಗ್ರಾಮದ ಮಹಿಳೆಗೆ ಪಾಸಿಟಿವ್ ಕಂಡುಬಂದಿದೆ. ಇದೀಗ 5 ಮಂದಿ ಮಹಿಳೆಯರು ಸೋಂಕಿತರಾದಂತಾಗಿದೆ.

ಜಾಹೀರಾತು

ತರಕಾರಿ ಔಷಧ, ಪತ್ರಿಕೆ, ಹಾಲು ವಿತರಣೆಗೆ ಮಂಜಪ್ಪ, ಇವರ ಮೇಲುಸ್ತುವಾರಿಯನ್ನು ಪಿಡಿಒ, ದಿನಸಿ ಸಾಮಾನುಗಳಾದ ಅಕ್ಕಿ, ಸಕ್ಕರೆ, ಬೇಳೆ, ಅಡುಗೆ ಎಣ್ಣೆ ಇತರೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲು ಸಂತೋಷ್ ಕುಮಾರ್, ಅದರ ಮೇಲುಸ್ತುವಾರಿಯನ್ನು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಹಣ್ಣುಗಳು ಹಾಗೂ ನಿಯಂತ್ರಿತ ವಲಯದ ಇತರ ಅವಶ್ಯಕತೆಗಳನ್ನು ಒದಗಿಸಲು ಸಂದೀಪ್ ಕುಮಾರ್ ಇವರ ಮೇಲ್ವಿಚಾರಕರಾಗಿ ಗ್ರಾಮಕರಣಿಕರು, ಇತರೆ ಮೂಲಭೂತ ಸೌಕರ್ಯಗಳಿಗಾಗಿ ಯತೀಶ್ ಕುಮಾರ್ ಇವರ ಮೇಲ್ವಿಚಾರಕರಾಗಿ ಮನೋಹರ್ ಇರುತ್ತಾರೆ. ನಿಯಂತ್ರಿತ ಪ್ರದೇಶದ ಕುಟುಂಬಗಳಿಗೆ ಅವಶ್ಯಕ ದಿನಬಳಕೆಯ ವಸ್ತುಗಳನ್ನು ಇವರು ಪೂರೈಸಲಿದ್ದು, ತಗಲುವ ಸಾಮಗ್ರಿ ವೆಚ್ಚವನ್ನು ಸಂಬಂಧಪಟ್ಟವರು ಪಾವತಿಸಬೇಕು. ತಮಗೆ ಅವಶ್ಯವಿರುವ ವಸ್ತುಗಳ ಬೇಡಿಕೆ ಕುರಿತು ಪೂರ್ಣ ವಿವರಗಳೊಂದಿಗೆ ಅವರಿಗೆ ಕರೆ ಮಾಡಬೇಕು. ಅನಿವಾರ್ಯ ಸಂದರ್ಭ ತುರ್ತು ಆರೋಗ್ಯ ಸೇವೆ ಲಭ್ಯ, ಪರಿಸರದ ನಿವಾಸಿಗಳು ಗ್ರಾಪಂ, ಕಂದಾಯ, ಪೊಲೀಸ್ ಇಲಾಖೆ ವಿಧಿಸುವ ಷರತ್ತುಗಳು ಹಾಗೂ ನಿರ್ಣಯಗಳಿಗೆ ಸದಾ ಬದ್ಧವಾಗಿರಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಪ್ಪ ಜನಕೊಂಡ ತಿಳಿಸಿದ್ದಾರೆ.

ಟಾಸ್ಕ್ ಫೋರ್ಸ್ ಸಮಿತಿಯ ವತಿಯಿಂದ ನರಿಕೊಂಬು ಗ್ರಾಪಂನಲ್ಲಿ ಸೀಲ್ ಡೌನ್ ಆದ ಮನೆಗಳಿಗೆ ನಿತ್ಯವಸ್ತುಗಳನ್ನು ಒದಗಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ನರಿಕೊಂಬಿನ ಸತ್ಯಶ್ರೀ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಿಂದ ಸಾಗುವ ದಾರಿಯನ್ನು ಬಂದ್ ಮಾಡಲಾಗಿದೆ. ಉಳಿದಂತೆ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ತಾಲೂಕಾಡಳಿತ ಸೂಚನೆಯಂತೆ ಕ್ರಮ ಕೈಗೊಳ್ಳಲಿದೆ ಎಂದು ನರಿಕೊಂಬು ಗ್ರಾಮದ ಪಿಡಿಒ ಶಿವಪ್ಪ ಜನಕೊಂಡ ತಿಳಿಸಿದ್ದು, ಇದರ ಉಸ್ತುವಾರಿಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ಪೇಟೆ, ನಾಯಿಲದಲ್ಲೀಗ ದಿಗ್ಬಂಧನಾ ಪ್ರದೇಶ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*