- ರಮೇಶ್ ಎಂ. ಬಾಯಾರು, ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ

ಕೊರೋನಾ ರೋಗಾಣುಗಳಿಗೆ ಬಲಿಯಾಗದಿರಲು ಸರಕಾರ ಹಾಕಿಕೊಂಡ ಕ್ರಮಗಳೆಲ್ಲವೂ ಜನಹಿತಾಧಾರಿತ. ಎಲ್ಲ ಕ್ರಮಗಳ ಅರ್ಥೈಸುವಿಕೆ ಮತ್ತು ಪೂರ್ಣಪ್ರಮಾಣದ ಅನು ಪಾಲನೆಯಿಂದ ನಮಗೆದುರಾಗುವ ದುಃಖಗಳಿಂದ ಮುಕ್ತಿಸಾಧ್ಯ. ಅನಗತ್ಯ ತಿರುಗಾಟ, ಅನಗತ್ಯ ಓಡಾಟವನ್ನು ಪ್ರತಿಯೊಬ್ಬರೂ ಸ್ವಯಂಶಿಸ್ತಿನಿಂದ ನಿಯಂತ್ರಿಸಲೇಬೇಕು. ನಮಗೆರಗಬಹುದಾದ ಕಾಯಿಲೆ ನಮ್ಮ ಪ್ರೀತಿ ಪಾತ್ರರಿಗೆ ನಮ್ಮ ಕಾರಣದಿಂದ ಹರಡಲೇ ಬಾರದು, ಅಂತಹ ಮಾರಣಾಂತಿಕ ಕಾಯಿಲೆಗೆ ಇತರರು ಒಳಗಾಗುವಂತೆ ಮಾಡಿದ ಪಾಪಿ ನಾನಾಗಬಾರದು ಎಂಬ ಬದ್ಧತೆ ನಮ್ಮಲ್ಲಿ ಬಲಿತು ಆದರ್ಶರೆನ್ನಿಸೋಣ. ಎಲ್ಲ ಇಲ್ಲಗಳ ನಡುವೆಯೂ ಮನೋಲ್ಲಾಸಭರಿತ ಜೀವನವೊಂದು ಇದ್ದೇ ಇದೆ ಎಂಬ ವಿಶ್ವಾಸ ಪ್ರತಿಯೊಬ್ಬರಲ್ಲೂ ದೃಢವಾಗಬೇಕು. ನಾವು ಕರೋನಾ ವಾರಿಯರ್ ಆಗೋಣ, ಕರೋನಾ ಕ್ಯಾರಿಯರ್ ಆಗದಿರೋಣ.
ಲೇಖಕರು ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ, ನಂದನ, ಕೇಪು 9448626093


Be the first to comment on "ವಾರಿಯರ್ ಆಗೋಣ, ಕ್ಯಾರಿಯರ್ ಆಗುವುದು ಬೇಡ"