ಲಾಕ್ ಡೌನ್ ನಿಯಮ ಬಿ.ಸಿ.ರೋಡಿನಲ್ಲಿ ಕಟ್ಟುನಿಟ್ಟು: ಪೊಲೀಸರಿಂದ ತಪಾಸಣೆ ಬಿಗು

ವಾಹನಗಳು ರಸ್ತೆಗಿಳಿಯುವ ಮುನ್ನ ನಿಯಮ ಪಾಲಿಸಿ – ಅಡಿಶನಲ್ ಎಸ್ಪಿ ಸೂಚನೆ

www.bantwalnews.com Editor: Harish Mambady

ಜಾಹೀರಾತು

ತುರ್ತು ವಿಷಯಗಳಾದ ಮೆಡಿಕಲ್, ವೆಟರ್ನರಿ ಕೇರ್, ಅಗತ್ಯ ವಸ್ತುಗಳ ಖರೀದಿ ಇದ್ದರೆ, ಖಾಸಗಿ ವಾಹನಗಳಲ್ಲಿ ಹಿಂದಿನ ಸೀಟಿನಲ್ಲಿ ಒಬ್ಬರಷ್ಟೇ ಕುಳಿತುಕೊಳ್ಳಲು ಅವಕಾಶವಿದೆ. ದ್ವಿಚಕ್ರವಾಹನವಾದರೆ, ಸವಾರನಿಗಷ್ಟೇ ಅವಕಾಶ ಎಂದು ಭಾರತ ಸರಕಾರದ ಗೃಹಸಚಿವಾಲಯ ಹೊರಡಿಸಿದ ಆದೇಶದಲ್ಲಿದ್ದು ಬಂಟ್ವಾಳ ಪೊಲೀಸರಂತೂ ಅದನ್ನು ಕಟ್ಟುನಿಟ್ಟಾಗಿ ಬುಧವಾರ ಬೆಳಗ್ಗೆಯೇ ಪಾಲಿಸುವ ಕಾರ್ಯಾಚರಣೆ ನಡೆಸಿದರು. 

Movement of persons is allowed in the following cases:

ಜಾಹೀರಾತು

Private vehicles for emergency services, including medical and veterinary care, and for procuring essential commodities. In such cases, one passenger besides the private veighcle driver can be permitted in the backseat, in case of four wheelers. However, In case of two-wheelers, only the driver of the vehicle is to be permitted. All personnel travelling to place of work and back in the exempted categories, as per the instructions of the state  local authority.

ಸಾರ್ವಜನಿಕ ವಾಹನ ಸಂಚಾರಕ್ಕೆ ಸಂಬಂಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿನ ಅಂಶಗಳು ಇವು. ಹೀಗಾಗಿ ಒಂದೆಡೆ ಅಪರಾಧ ವಿಭಾಗದ ಎಸ್.ಐ. ಸಂತೋಷ್ ಮತ್ತು ಕೆಲ ಸಿಬ್ಬಂದಿ, ದ್ವಿಚಕ್ರ ವಾಹನ, ಕಾರುಗಳಲ್ಲಿ ಬರುವವರನ್ನು ನಿಲ್ಲಿಸಿ, ವಿಚಾರಿಸಿ, ಕೆಲವರನ್ನು ನೇರ ಪೊಲೀಸ್ ಸ್ಟೇಶನ್ ಗೆ ಕಳುಹಿಸುತ್ತಿದ್ದರೆ, ಮತ್ತೊಂದೆಡೆ ಎಸ್.ಐ. ಅವಿನಾಶ್ ಧ್ವನಿವರ್ಧಕದ ಮೂಲಕ ವಾಹನ ಸವಾರಷ್ಟೇ ಅಲ್ಲ, ಗುಂಪುಗೂಡುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕಾರ್ಯ ನಡೆಸಿದರು.

ಜಾಹೀರಾತು

ಬೆಳಗ್ಗೆ 7ರಿಂದ 12 ಗಂಟೆ ಅವಧಿಯಲ್ಲಿ ಕೇವಲ ಸುತ್ತಾಟಕ್ಕೆ ಬರುವವರಷ್ಟೇ ಅಲ್ಲ, ಸ್ವಂತ ವಾಹನಗಳಲ್ಲಿ ಔಷಧ ವಸ್ತು ಖರೀದಿ, ಬ್ಯಾಂಕುಗಳಿಗೆ ಬರುವವರೂ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಈ ಸೂಚನೆಗಳ ಅರಿವಿಲ್ಲದವರು, ಬ್ಯಾಂಕು ಮತ್ತಿತರ ಕಡೆಗಳಿಗೆ ಬಂದವರೂ ಪೊಲೀಸರ ತಡೆಗೆ ಒಳಪಟ್ಟರು. ಬಳಿಕ ಎಡಿಶನಲ್ ಎಸ್ಪಿ ವಿಕ್ರಮ್ ಆಮ್ಟೆ ಸ್ಥಳಕ್ಕಾಗಮಿಸಿ ಸಮಸ್ಯೆಯನ್ನರಿತು ಕೆಲವರಿಗೆ ಸೂಚನೆ ನೀಡಿ ಕಳುಹಿಸಿದರು. ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಎಸ್ಸ್ಐ ಅವಿನಾಶ್, ಅಪರಾಧ ವಿಭಾಗ ಎಸ್ಸ್ಐ ಸಂತೋಷ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬುಧವಾರ ಬಂಟ್ವಾಳ ಪೊಲೀಸರು ವಶಪಡಿಸಿಕೊಂಡ ವಾಹನಗಳಿಂದ ಫೈನ್ ಹಾಕಿಸಿಕೊಳ್ಳಲು ಸ್ಟೇಶನ್ ಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ಕಿಡಿಗೇಡಿಗಳ ವದಂತಿ: ಜನ್ ಧನ್ ಖಾತೆ ಹಣಪಡೆಯಲು ಕ್ಯೂ

ಜಾಹೀರಾತು

ಸರಕಾರದ ಜನ್ ಧನ್ ಖಾತೆಗೆ ಹಾಕಿದ ಹಣ ವಾಪಸ್ ಹೋಗುತ್ತದೆ ಎಂದು ಕಿಡಿಗೇಡಿಗಳು ವದಂತಿ ಹಬ್ಬಿಸಿದ ಹಿನ್ನೆಲೆಯಲ್ಲಿ ಬ್ಯಾಂಕುಗಳ ಮುಂದೆ ಹಣ ಪಡೆಯಲು ಕ್ಯೂ ಕಂಡುಬಂತು. ಬಂಟ್ವಾಳ, ಬಿ.ಸಿ.ರೋಡ್ ಸಹಿತ ಕೆಲ ಕಡೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮುಂದೆ ಗುಂಪುಗೂಡಿದ್ದು ಸಮಸ್ಯೆಗೆ ಕಾರಣವಾಯಿತು. ಕೆಲವು ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡದೆ  ಗುಂಪುಗೂಡಿದ್ದು ಸಮಸ್ಯೆಗೆ ಕಾರಣವಾಯಿತು. ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಶ್ಮಿ. ಎಸ್.ಆರ್ ಅವರು ಎಲ್ಲಾ ಬ್ಯಾಂಕ್ ಗಳಿಗೂ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಎಲ್ಲಾ ಬ್ಯಾಂಕ್ ಗಳಿಗೂ ಎಚ್ಚರಿಕೆ ನೀಡಿದ್ದಾರೆ. ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮತ್ತು ಎಸ್.ಐ.ಗಳಾದ ಪ್ರಸನ್ನ, ಅವಿನಾಶ್ , ವಿನೋದ್ ರೆಡ್ಡಿ ಹಾಗೂ ಪುಂಜಾಲಕಟ್ಟೆ ವ್ಯಾಪ್ತಿಯ ಲ್ಲಿ ಎಸ್.ಐ.ಸೌಮ್ಯ ಬ್ಯಾಂಕ್ ಗಳಿಗೂ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರಿಗೆ ಮನವಿ ಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಲಾಕ್ ಡೌನ್ ನಿಯಮ ಬಿ.ಸಿ.ರೋಡಿನಲ್ಲಿ ಕಟ್ಟುನಿಟ್ಟು: ಪೊಲೀಸರಿಂದ ತಪಾಸಣೆ ಬಿಗು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*