ಕೊನೆಗೂ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ – ಯಾರಿಗೆ ಆಡಳಿತ?

www.bantwalnews.com Editor: Harish Mambady

ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪಟ್ಟಿಯನ್ನು ಬುಧವಾರ ರಾಜ್ಯ ಸರಕಾರ ಪ್ರಕಟಿಸಿದ್ದು, ಸಾಮಾನ್ಯ ಮಹಿಳೆ ಅಧ್ಯಕ್ಷ ಹುದ್ದೆಗೆ ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ ಉಪಾಧ್ಯಕ್ಷ ಹುದ್ದೆಗೆ ಅರ್ಹರಾಗಿದ್ದಾರೆ. 2018ರಲ್ಲಿ ಚುನಾವಣೆ ನಡೆದಿದ್ದು, ಒಂದು ಬಾರಿ ಮೀಸಲಾತಿ ಪ್ರಕಟಗೊಂಡಿತ್ತು. ಆದರೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ ಕಾರಣ ಮತ್ತೆ ವಿಳಂಬಗೊಂಡಿತು. ಅದಾದ ಬಳಿಕ ಮೀಸಲಾತಿ ಪಟ್ಟಿ ಘೋಷಣೆಯಾಗುತ್ತಿರುವುದು ಇದೇ ಮೊದಲು. ಒಟ್ಟು 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.. 4 ಗೆದ್ದಿದ್ದು, ಬಿಜೆಪಿಗೆ ಲೋಕಸಭಾ ಸದಸ್ಯ ಮತ್ತು ವಿಧಾನಸಭಾ ಸದಸ್ಯರ ಮತ ಸೇರುತ್ತದೆ. ಒಟ್ಟು 12 ಮಹಿಳಾ ಸದಸ್ಯರು ಆಯ್ಕೆಯಾಗಿದ್ದು ಬಿಜೆಪಿಯ 8, ಕಾಂಗ್ರೆಸ್ ನ 2 ಮತ್ತು ಎಸ್.ಡಿ.ಪಿ.ಐ. ನ 2 ಸದಸ್ಯರು ವಿಜಯಿಯಾಗಿದ್ದಾರೆ. ಎಲ್ಲರೂ ಅಧ್ಯಕ್ಷ ಹುದ್ದೆಗೆ ಅರ್ಹರು. ಉಪಾಧ್ಯಕ್ಷ ಹುದ್ದೆ ಮೀಸಲಾತಿ ಪ್ರಕಾರ ಬಿಜೆಪಿಯ ಮೀನಾಕ್ಷಿ ಗೌಡ ಮತ್ತು ಕಾಂಗ್ರೆಸ್ ನ ಜೆಸಿಂತಾ ಡಿಸೋಜ ಅರ್ಹರಾಗಿದ್ದು ಎಲ್ಲ ಪಕ್ಷಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ. ಬಿಜೆಪಿಯ ಮೀನಾಕ್ಷಿ ಜೆ. ಗೌಡ, ರೇಖಾ ರಮಾನಾಥ ಪೈ , ದೇವಕಿ ಶಿವಪ್ಪ ಪೂಜಾರಿ, ಶಶಿಕಲಾ ಪ್ರಭಾಕರ್ , ಶೋಭಾ ಹರಿಶ್ಚಂದ್ರ , ಜಯಂತಿ ವಸಂತ ಕುಲಾಲ್, ವಿದ್ಯಾವತಿ ಪ್ರಮೋದ್ ಕುಮಾರ್ , ಚೈತನ್ಯಾ ಎ. ದಾಸ್  ಎಸ್.ಡಿ.ಪಿ.ಐನ ಸಂಶದ್, ಝೀನತ್  ಕಾಂಗ್ರೆಸ್ ಜೆಸಿಂತಾ ಡಿಸೋಜ , ಗಾಯತ್ರಿ ಜೆ ಮಹಿಳಾ ಸದಸ್ಯರು.

ಮೀನಾಕ್ಷಿ ಗೌಡ

ರೇಖಾ ರಮಾನಾಥ ಪೈ

ದೇವಕಿ

ಶಶಿಕಲಾ

ಶೋಭಾ

ಜಯಂತಿ

ವಿದ್ಯಾವತಿ

ಚೈತನ್ಯಾ

ಜೆಸಿಂತಾ ಡಿಸೋಜ

ಗಾಯತ್ರಿ ಪ್ರಕಾಶ್

 

 

 

 

ಜೀ

ಜೀನತ್

ಸಂಶದ್

 

 

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೊನೆಗೂ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ – ಯಾರಿಗೆ ಆಡಳಿತ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*