ಬಂಟ್ವಾಳ ತಾಲೂಕಿನ ವೀರಕಂಭ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಹಮೀದ್ ಎಂಬವರ ವಾಣಿಜ್ಯ ಕಟ್ಟಡ ಹಾಗೂ ಮನೆ ಇರುವ ಜಾಗದಲ್ಲಿ ಬುಧವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬಂಟ್ವಾಳ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಪಂಚಾಯಿತಿ ಕಟ್ಟಡ ಎದುರು ರಸ್ತೆ ಬದಿ ಅವರ ಮನೆ ಹಾಗೂ ಅಂಗಡಿ ಇದ್ದು, ಮಳಿಗೆಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಗಮನಕ್ಕೆ ತಂದಿದ್ದು, ಕೂಡಲೇ ಅಗ್ನಿಶಾಮಕದಳ, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹಮೀದ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಅಗ್ನಿಶಾಮಕದಳ ಕೂಡಲೇ ಕ್ರಮ ಕೈಗೊಂಡ ಕಾರಣ ಬೆಂಕಿ ನಂದಿಸಲು ಸಹಕಾರಿಯಾಗಿದ್ದು, ವಿಟ್ಲ ಎಸ್ಸೈ ವಿನೋದ್ ಮತ್ತು ಸಿಬ್ಬಂದಿ ಬಂದೋಬಸ್ತ್ ನಡೆಸಿ, ಬೆಂಕಿ ನಂದಿಸಲು ಸಹಕರಿಸಿದರು. ನಷ್ಟದ ಪ್ರಮಾಣ ಹಾಗೂ ಅಗ್ನಿ ಅನಾಹುತಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
Be the first to comment on "ವೀರಕಂಭ: ಬೆಂಕಿಗೆ ಸಿಲುಕಿದ ಅಂಗಡಿ ಮಳಿಗೆ"