ನಂದಾವರ: ವೈಭವದ ಮಹಾರಥೋತ್ಸವ

www.bantwalnews.com ಸಂಪಾದಕ: ಹರೀಶ ಮಾಂಬಾಡಿ

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬುಧವಾರ ಶ್ರೀದೇವರ ಮಹಾರಥೋತ್ಸವ ರಾತ್ರಿ ನಡೆಯಿತು.

ಫೆ.9ರಂದು ಜಾತ್ರೋತ್ಸವ ಕಾರ್ಯಕ್ರಮಗಳು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಜನರ ಪಾಲ್ಗೊಳ್ಳುವಿಕೆಯಿಂದ ಆರಂಭಗೊಂಡವು. 9ರಂದು ಸಂಜೆ ಸಜೀಪನಡು ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಭಂಡಾರ ಹೊರಟು, ರಾತ್ರಿ ಶ್ರೀ ಕ್ಷೇತ್ರಕ್ಕೆ ತಲುಪಿತು. ಬಳಿಕ ಧ್ವಜಾವರೋಹಣ, ರಾತ್ರಿ ದೇವರ ಬಲಿ ಉತ್ಸವಗಳು ನೆರವೇರಿದವು. ಫೆ.10ರಿಂದು ಬಯನಬಲಿ ಉತ್ಸವ, ರಾತ್ರಿ ದೇವರ ಬಲಿ, ಫೆ.11ರಂದು ನಡುಬಲಿ, ಪಾಲಕಿ ಉತ್ಸವ, ರಾತ್ರಿ ಶ್ರೀ ದೇವರ ಬಲಿ, ಪಾಲಕಿ ಉತ್ಸವ ಹಾಗೂ ರಥಬೀದಿಯಲ್ಲಿ ಸಾಗಿ ಕಟ್ಟೆ ಉತ್ಸವ ನಡೆದವು.

ಬುಧವಾರ ಮಹಾರಥೋತ್ಸವ ನಡೆಯಿತು. ಮಧ್ಯಾಹ್ನ ಶ್ರೀದೇವರ ರಥಾರೋಹಣ, ಅನ್ನಸಂತರ್ಪಣೆ ಇತ್ತು. ರಾತ್ರಿ ಕೀಲುಕುದುರೆ, ಕರಗನೃತ್ಯ, ಗೊಂಬೆ ಕುಣಿತ, ಚೆಂಡೆ ವಾದನದೊಂದಿಗೆ ಮಹಾರಥೋತ್ಸವ ಸುಡುಮದ್ದು ಪ್ರದರ್ಶನ, ಶ್ರೀದೇವರ ಬಲಿ ಉತ್ಸವದೊಂದಿಗೆ ನಡೆಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಪ್ರಧಾನ ಅರ್ಚಕ ವೇ.ಮೂ. ಮಹೇಶ ಭಟ್ಟ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾಧರ ಭಟ್ ಕೊಳಕೆ, ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಕೆ.ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್. ಭಂಡಾರಿ ಇದ್ದರು. ರಥೋತ್ಸವ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು.

ಫೆ.13ರಂದು ಗುರುವಾರ ಧ್ವಜಾವರೋಹಣ, ನಾಲ್ಕೈತ್ತಾಯ ದೈವದ ನೇಮ, ರಾತ್ರಿ ಅವಭೃತ ಸ್ನಾನ, ದೈವದ ನೇಮೋತ್ಸವ ಹಾಗೂ 14ರಂದು ಸಂಪ್ರೋಕ್ಷಣೆ ನೆರವೇರಲಿದೆ

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ನಂದಾವರ: ವೈಭವದ ಮಹಾರಥೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*