ಕೆಟ್ಟು ನಿಂತಿದ್ದ ಲಾರಿ ಹಠಾತ್ತನೆ ಚಲಿಸಿದ ಪರಿಣಾಮ ಎದುರುಗಡೆ ನಿಲ್ಲಿಸಿದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಘಟನೆ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಗುರುವಾರ ಸಂಭವಿಸಿದೆ.
ಜಾಹೀರಾತು
ಅಟೋ ರಿಕ್ಷಾದಲ್ಲಿ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಬುಧವಾರ ರಾತ್ರಿ ಲಾರಿ ಕೆಟ್ಟು ಹೋದ ಹಿನ್ನೆಲೆಯಲ್ಲಿ ಮಾಣಿ ಸಮೀಪದ ಸೂರಿಕುಮೇರು ರಸ್ತೆ ಬದಿಯಲ್ಲಿ ನಿಂತಿತ್ತು. ಗುರುವಾರ ಬೆಳಗ್ಗೆ ಆಟೋ ರಿಕ್ಷಾದಲ್ಲಿ ಬಂದ ಮೆಕ್ಯಾನಿಕ್ ಲಾರಿ ಮುಂಭಾಗದಲ್ಲಿ ರಿಕ್ಷಾ ನಿಲ್ಲಿ, ದುರಸ್ತಿ ಕಾರ್ಯ ಆರಂಭಿಸಿದ್ದರು. ಈ ಸಂದರ್ಭ ಲಾರಿ ಗೇರ್ ನ್ಯೂಟ್ರಲ್ಗೆ ಬಿದ್ದ ಪರಿಣಾಮ ಎದುರುಗಡೆ ಇದ್ದ ರಿಕ್ಷಾಕ್ಕೆ ಗುದ್ದಿ ಬಳಿಕ ಮರಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾದೊಳಗಡೆ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸೂರಿಕುಮೇರು: ಆಟೊಗೆ ಡಿಕ್ಕಿ ಹೊಡೆದ ಲಾರಿ"