ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಮೇ.24ರಂದು ಸಾಮೂಹಿಕ ವಿವಾಹವನ್ನು ನಡೆಸಲಾಗುವುದು ನಂದಾವರ ಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ಹರಿಶ್ಚಂದ್ರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದ ನಿರ್ದೇಶನದಂತೆ ಸಾಮೂಹಿಕ ವಿವಾಹ ನಡೆಯಲಿದೆ. ಕರ್ನಾಟಕ ಸರಕಾರ ಹಿಂದು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯುವ ವಿವಾಹದಲ್ಲಿ ವರನಿಗೆ ರೂ. 5 ಸಾವಿರ, ವಧುವಿಗೆ 10 ಸಾವಿರ ಮತ್ತು ಚಿನ್ನದ ತಾಳಿ ಸೇರಿದಂತೆ ಚಿನ್ನಕ್ಕಾಗಿ 40 ಸಾವಿರ ರೂ ನೀಡಲಾಗುತ್ತದೆ. ವಧೂವರರು ವಿವಾಹ ನೋಂದಾಯಿಸಿಕೊಳ್ಳಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದ್ದು ಏ.30ರಂದು ವಧೂವರರ ವಿವರ ದೇವಾಲಯದಲ್ಲಿ ಪ್ರಕಟಿಸಲಾಗುವುದು. ವಧೂವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮೇ.4 ಆಗಿದ್ದು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧೂವರರ ಪಟ್ಟಿಯನ್ನು ಮೇ.2ರಂದು ಪ್ರಕಟಿಸಲಾಗುವುದು ದೇವಸ್ಥಾನದ ದೂರವಾಣಿ ಸಂಖ್ಯೆ 9480280091, 08255-280091 ಸಂಪರ್ಕಿಸಬಹುದು.
www.bantwalnews.com Editor: Harish Mambady

Be the first to comment on "ನಂದಾವರದಲ್ಲಿ ಮೇ.24ರಂದು ಸಾಮೂಹಿಕ ವಿವಾಹ"