ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಯಿತು. ಹಬ್ಬದ ಮಹತ್ವವನ್ನು ಶಾಲೆಯ ಅಧ್ಯಾಪಕ ಸುಮಂತ್ ಆಳ್ವ ವಿವರಿಸಿದರು. ವಿದ್ಯಾರ್ಥಿಗಳು ದೀಪಪ್ರಜ್ವಲನೆ ಮಾಡಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ವಿದ್ಯಾರ್ಥಿಗಳನ್ನು ಸಾಲಾಗಿ ಕುಳ್ಳಿರಿಸಿ ಅವರ ಕೈಗೆ ಮಣ್ಣಿನ ಹಣತೆ ನೀಡಲಾಯಿತು. ಅಧ್ಯಾಪಕರು ಆ ಹಣತೆಯನ್ನು ಜ್ಞಾನದ ಸಂಕೇತವಾಗಿ ಉರಿಸಿದರು. ವಿದ್ಯಾರ್ಥಿನಿಯರಾದ ಆದಿಶ್ರೀ ಹಾಗೂ ಅನಘಾ ಪ್ರೇರಣಾ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ನಿರ್ವಹಿಸಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಬೆಳಕಿನ ಹಬ್ಬ ಆಚರಣೆ"