ಸರಳ ವಿಧಾನ, ಹೊಸ ರೂಪದೊಂದಿಗೆ ತ್ಯಾಜ್ಯ ಸಂಸ್ಕರಣೆ

ರಸ್ತೆ ಮಧ್ಯೆ ಹೊಂಡ ಕೊರೆದು, ಅದರ ಮೇಲೆ ಕಾಂಕ್ರೀಟ್ ಎರೆದು ಏಳೆಂಟು ವರ್ಷಗಳು ಉರುಳಿದರೂ ಬಂಟ್ವಾಳದಲ್ಲಿ ಯುಜಿಡಿ ಇನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ತ್ಯಾಜ್ಯ ಸಂಸ್ಕರಣೆಯಲ್ಲಿ ಮುಖ್ಯವಾದ ಮಾನವ ತ್ಯಾಜ್ಯ ವಿಲೇವಾರಿ ಬೆಳೆಯುತ್ತಿರುವ ಬಂಟ್ವಾಳಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಹೊತ್ತಿನಲ್ಲೇ ಇದೀಗ ಮಾನವ ತ್ಯಾಜ್ಯ ಕಲ್ಮಶದ ನಿರ್ವಹಣೆ ಮತ್ತು ವಿಲೇವಾರಿಗೆ ಪ್ರಾಯೋಗಿಕವಾಗಿ ಕಲ್ಮಶ ನಿರ್ವಹಣಾ ಘಟಕ (ಎಫ್​ಎಸ್​ಎಸ್​ಎಂ)ಸ್ಥಾಪನೆ ಕುರಿತು ಚಿಂತನೆ ನಡೆದಿವೆ.

www.bantwalnews.com Editor: Harish Mambady For Advertisements Contact: 9448548127

ಕೇಂದ್ರ ಸರಕಾರದ ಅಮೃತ್ ಯೋಜನೆಯಡಿ ಬರುವ ಎಫ್.ಎಸ್.ಎಸ್.ಎಂ ಅನ್ನು ಹಿಂದಿನ ರಾಜ್ಯ ಸರಕಾರ ರಾಜ್ಯದ 55 ನಗರ, ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಿಸಿತ್ತು. ಈ ಬಾರಿ ಬಂಟ್ವಾಳವನ್ನೂ ಇದರಲ್ಲಿ ಅಳವಡಿಸಿ, ಸುದೀರ್ಘವಾಗಿರುವ ಯುಜಿಡಿ ಸಮಸ್ಯೆಗೆ ತೆರೆ ಎಳೆಯಲು ಶಾಸಕ ರಾಜೇಶ್ ನಾಯ್ಕ್ ನಿರ್ಧರಿಸಿದ್ದಾರೆ.

ವೆಚ್ಚ ಕಡಿಮೆ, ನಿರ್ವಹಣೆ ಸುಲಭ:

ಮನೆಗಳಿಂದ ಮಾನವ ತ್ಯಾಜ್ಯ ಯುಜಿಡಿ ಪೈಪ್ ಮೂಲಕ ಟ್ರೀಟ್ಮೆಂಟ್ ಪ್ಲಾಂಟ್ ಗೆ ಹೋಗುವುದು, ಇಡೀ ನಗರದಲ್ಲೆಲ್ಲಾ ಕೊಳವೆಗಾಗಿ ರಸ್ತೆ ಕೊರೆಯುವುದು, ಸಾಗಾಟ ಸಮಸ್ಯೆ, ಕೊಳವೆ ಒಡೆದುಹೋಗುವ ಸಮಸ್ಯೆಗಳು ಉಂಟಾದಾಗ ಎಲ್ಲರೂ ತೊಂದರೆ ಅನುಭವಿಸುವುದು, ಆಡಳಿತಕ್ಕೂ ದೊಡ್ಡ ತಲೆನೋವು. ಆದರೆ ಎಫ್.ಎಸ್.ಎಸ್.ಎಂ. ಹಾಗಲ್ಲ.

ಇದರಿಂದ ಘನ ತ್ಯಾಜ್ಯ ವಿಲೇವಾರಿ ವೆಚ್ಚ ಹಾಗೂ ತ್ಯಾಜ್ಯದ ಸಮಸ್ಯೆ ಕಡಿಮೆಯಾಗಲಿದೆ. ಅಮೃತ್ ಅಭಿಯಾನದ ಅಂಗವಾಗಿ ನಗರ ಪ್ರದೇಶಗಳಲ್ಲಿ ಕಲ್ಮಷಗಳ ತ್ಯಾಜ್ಯ ಸಂಸ್ಕರಣೆ, ವಿಭಜನೆ ಮತ್ತು ನಿರ್ವಹಣೆ (ಫೇಕಲ್ ಸ್ಲಡ್ಜ್ ಆಂಡ್ ಸೆಪ್ಟೇಜ್ ಮ್ಯಾನೇಜ್ ಮೆಂಟ್) – ಎಫ್ ಎಸ್.ಎಸ್.ಎಂ.ಒಳಚರಂಡಿ ವ್ಯವಸ್ಥೆಯ ಸುಧಾರಿತ ರೂಪ. ಆದರೆ ಇದನ್ನು ಸುರಕ್ಷಿತವಾಗಿ ನಿರ್ವಹಿಸುವುದು ಅಷ್ಟೇ ಮುಖ್ಯ. ತಾಂತ್ರಿಕ ವ್ಯವಸ್ಥೆಗಳಿಂದ ಸೆಪ್ಟಿಕ್ ಟ್ಯಾಂಕ್ ಅಥವಾ ಮಾನವ ತ್ಯಾಜ್ಯಗಳಿರುವ ಪಿಟ್ ಗಳಿಂದ ತ್ಯಾಜ್ಯ ಸಂಗ್ರಹಿಸುವುದು ಅದನ್ನು ಮುಚ್ಚಿದ ಕಂಟೈನರ್ ನೊಳಗೆ ಹಾಕಿ, ಅವನ್ನು ಟ್ರೀಟ್ಮೆಂಟ್ ಪ್ಲಾಂಟ್ ಗಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅವನ್ನು ಸಂಸ್ಕರಿವುದು ಇದರ ಥೀಮ್.

ನಗರದ ಒಳಚರಂಡಿ ವ್ಯವಸ್ಥೆಯ ವೆಚ್ಚದ ಶೇ.3.5 ವೆಚ್ಚದಲ್ಲಿ ಮಾನವ ತ್ಯಾಜ್ಯ ಹಾಗೂ ಕಲ್ಮಶ ಸಂಸ್ಕರಣ ಯೋಜನೆ ಕೈಗೊಳ್ಳಬಹುದು. ಪರಿಸರ ಸಂರಕ್ಷಣೆಗೂ ಇದು ಸಹಕಾರಿ. ಸಂಸ್ಕರಣೆಯಿಂದ ಉತ್ಪಾದನೆಯಾಗುವ ಮಿಶ್ರಗೊಬ್ಬರವನ್ನು ಮಾರುವುದರಿಂದ ಪುರಸಭೆಯ ಆರ್ಥಿಕ ವ್ಯವಸ್ಥೆ ಸಬಲವಾಗುವುದಲ್ಲದೆ ಸಾರ್ವಜನಿಕರಿಗೆ ದಕ್ಷತೆಯ ಮತ್ತು ಮೌಲ್ಯವರ್ಧಿತ ಸೇವೆ ಒದಗಿಸಲು ಸಹಕಾರಿ. ದೇವನಹಳ್ಳಿ ನಗರಸಭೆಯಲ್ಲಿ ಮಿಶ್ರಗೊಬ್ಬರವನ್ನು ರೈತನಿಗೆ ಪ್ರತಿ ಕೆ.ಜಿ.ಗೆ 3ರಿಂದ 7ರವರೆಗೆ ಮಾರಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯು ಎಫ್.ಎಸ್.ಟಿ.ಪಿ. ಯಂತ್ರೋಪಕರಣ ಅಳವಡಿಕೆ, ನಿರ್ಮಾಣ, ನಿರ್ವಹಣೆ ಕಾರ್ಯ ಮಾಡುತ್ತಿದ್ದು, ಘಟಕಗಳ ತಾಂತ್ರಿಕತೆ, ಸಾಮರ್ಥ್ಯ, ಪ್ರದೇಶ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಘಟಕಗಳ ನಿರ್ಮಾಣ ಮತ್ತು ನಿರ್ವಹಣೆ ಸಂಬಂಧಿಸಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಸರಳ ವಿಧಾನ, ಹೊಸ ರೂಪದೊಂದಿಗೆ ತ್ಯಾಜ್ಯ ಸಂಸ್ಕರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*