ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದ ದರ್ಪಣ ತೀರ್ಥ ನದಿ ಸೋಮವಾರ ಉಕ್ಕಿ ಹರಿಯಲಾರಂಭಿಸಿತು.
ಕುಮಾರ ಪರ್ವತದಿಂದ ಹರಿದು ಬರುತ್ತಿರುವ ಈ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು,ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿತು. ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕಿಸುವ ಕಿರು ಸೇತುವೆಯೂ ಮುಳುಗಡೆಯಾಯಿತು. ನದಿ ತೀರದ ಕೃಷಿ ಭೂಮಿಗಳೂ ಮುಳುಗಡೆಯಾಗಿದೆ. ಅಲ್ಲದೆ ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೂ ನೀರು ನುಗ್ಗಿತ್ತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಉಕ್ಕಿ ಹರಿದ ದರ್ಪಣ ತೀರ್ಥ, ಸುಬ್ರಹ್ಮಣ್ಯ ಪರಿಸರದಲ್ಲಿ ಪ್ರವಾಹ"