ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಭಾನುವಾರ ತೆನೆಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು. ಲೋರೆಟ್ಟೋ ಪದವಿನಲ್ಲಿ ನಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಆರಂಭವಾದ ಆಚರಣೆ, ಕನ್ಯೆ ಮೇರಿಯಮ್ಮ ಮೂರ್ತಿಯನ್ನು ಪಟಾಕಿ, ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಮೂಲಕ ಚರ್ಚ್ ಗೆ ತರಲಾಯಿತು. ಈ ಸಂದರ್ಭ ಮಕ್ಕಳು ಹೂಗಳನ್ನು ಅರ್ಪಿಸಿದರು.
ಬಳಿಕ ಬಲಿಪೂಜೆ ನಡೆಯಿತು. ಪ್ರಧಾನ ಧರ್ಮಗುರುಗಳಾಗಿ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ. ರೋಕ್ವಿನ್ ಪಿಂಟೋ ಕನ್ಯಾ ಮಾರಿಯಮ್ಮ ಜನ್ಮದಿನದ ಸಂದೇಶ ನೀಡಿದರು. ಅವರೊಂದಿಗೆ ವಂ. ದಿಲ್ರಾಜ್ ಹಾಗೂ ಲೋರೆಟ್ಟೋ ಚರ್ಚ್ ಧರ್ಮ ಗುರುಗಳಾದ ವಂ. ಎಲಿಯಸ್ ಡಿಸೋಜಾ ಸೇರಿದ್ದ ಭಕ್ತರೊಂದಿಗೆ ಬಲಿ ಪೂಜೆಯನ್ನು ಅರ್ಪಿಸಿದರು.
ಬಳಿಕ ಭಕ್ತರಿಗೆ ತೇನೆಯನ್ನು ವಿತರಿಸಲಾಯಿತು.ಚರ್ಚ್ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾಹನಗಳನ್ನು ಮೈದಾನದಲ್ಲಿ ಸಾಲಾಗಿ ನಿಲ್ಲಿಸಿ ಆಶಿರ್ವಚಿಸಲಾಯಿತು. ಬಳಿಕ ಸೇರಿದ್ದವರಿಗೆ ಉಪಹಾರ ಹಾಗೂ ಕಬ್ಬು ವಿತರಿಸಲಾಯಿತು. ಕಥೋಲಿಕ್ ಸಭಾ ಲೋರೆಟ್ಟೋ ಘಟಕದ ವತಿಯಿದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮಗಳನ್ನು ಚರ್ಚ್ ನ ವಾಹನ ಚಾಲಕ – ಮಾಲಕ ಸಂಘ ,ಚರ್ಚ್ ಪಾಲನಾ ಮಂಡಳಿ ಆಯೋಜಿಸಿತ್ತು.ಕನ್ಯಾ ಮಾರಿಯಮ್ಮ ಮೂರ್ತಿಯನ್ನು ಹಾಗೂ ಚರ್ಚ್ ಅಲ್ತಾರ್ ಫ್ಲವರ್ ಡೆಕೋರೇಟರ್ಸ್ ಅಲಂಕರಿಸಿದ್ದರು.
Be the first to comment on "ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ತೆನೆಹಬ್ಬ"