- ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಬೇಬಿ ಕುಂದರ್ ಪ್ರಶ್ನೆ
ಅಂದು ನಮ್ಮ ಕಣ್ಣೆದುರೇ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದೊಂದದಿಗೆ ವಿಲೀನಗೊಂಡಿದು. ಅದಕ್ಕೂ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸುರು ಜತೆಯಾಯಿತು. ವಿಜಯಾ ಬ್ಯಾಂಕ್ ವಿಲೀನವಾಗುವ ಸಂದರ್ಭವೇ ಸಿಂಡಿಕೇಟ್, ಕಾರ್ಪೊರೇಶನ್ ಬ್ಯಾಂಕುಗಳಿಗೂ ಇದೇ ಸ್ಥಿತಿ ಬರಲಿದೆ ಎಂದು ಹೇಳಿದ್ದೆ ಅದೀಗ ನಿಜವಾಗಿದೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ಮ್ಯಾಜೇಜರ್ ಬೇಬಿ ಕುಂದರ್ ಹೇಳಿದ್ದಾರೆ.
ಬ್ಯಾಂಕುಗಳು ವಿಲೀನವಾಗುವ ಪ್ರಕ್ರಿಯೆಗಳು ಒಂದೆಡೆ ನಡೆಯುತ್ತಿರುವ ಸಂದರ್ಭ, ಇನ್ನೊಂದೆಡೆ ಶಾಖೆಗಳನ್ನು ಬಂದ್ ಮಾಡುವ ಪ್ರಕ್ರಿಯೆ ನಡೆಸುವುದು ಆಘಾತಕಾರಿ ವಿಚಾರ. ಹೀಗಾದರೆ ಗ್ರಾಹಕರು ಎಲ್ಲಿಗೆ ಹೋಗಬೇಕು, ಬ್ಯಾಂಕ್ ವಿಲೀನ ವಿಚಾರ ಸಂದರ್ಭ ನೌಕರರ ಹಿತವನ್ನಷ್ಟೇ ಅಲ್ಲ, ಗ್ರಾಹಕರ ಸಂಕಷ್ಟಗಳ ಬಗ್ಗೆಯೂ ಸರಕಾರ ಗಮನಹರಿಸಬೇಕು, ಹೀಗಾಗಿ ಬ್ಯಾಂಕ್ ವಿಲೀನ ಪ್ರಕ್ರಿಯೇಯೇ ಸರಿಯಲ್ಲ, ಇಂಥ ಪ್ರಕ್ರಿಯೆಯಿಂದ ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ವಿಲೀನಗೊಂಡ ಬ್ಯಾಂಕ್ ಬೀಗ ಹಾಕಿದರೆ ಗ್ರಾಹಕರು ಎಲ್ಲಿಗೆ ಹೋಗೋದು?"