ಈದ್ ಆಚರಣೆಯೊಂದಿಗೆ ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ

ಬಂಟ್ವಾಳ ತಾಲೂಕಿನಾದ್ಯಂತ ಸರಳವಾಗಿ ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಸೋಮವಾರ ಆಚರಿಸಲಾಯಿತು. ಈದ್ ಪ್ರಾರ್ಥನೆಯ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ದಾನ ಧರ್ಮಗಳನ್ನು ನಡೆಸಿದರು. ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಕಿಟ್, ದೇಣಿಗೆಯನ್ನು ಸಂಗ್ರಹಿಸುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಿದರು.

ತಲಪಾಡಿ

ಲೊರೆಟ್ಟೋಪದವು

ನೂರುದ್ದೀನ್ ಜುಮ್ಮಾ ಮಸೀದಿ

ಮುಹಿಯುದ್ದೀನ್ ಜುಮ್ಮಾ ಮಸೀದಿ ಕೆರೆಬಳಿ

ಬಂಟ್ವಾಳ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಮತ್ತು ಶಾಂತಿ, ಏಕತೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉಸ್ತಾದ್ ಉಸ್ಮಾನ್ ದಾರಿಮಿ ಕುತುಬಾ ನೆರವೇರಿಸಿದರು. ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ಯಾಕೂಬ್ ಪೈಝಿ ಕುತುಬಾ ನಿರ್ವಹಿಸಿದರು. ಬಿ.ಸಿ.ರೋಡ್ ಮಸ್ಜಿದುಲ್ ಇಸ್ಲಾಮ್, ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ, ಬಂಟ್ವಾಳ ಬದ್ರಿಯಾ ಜುಮಾ ಮಸೀದಿ, ಸಜಿಪಮೂಡ-ಕಾರಾಜೆ ನೂರುಲ್ ಹುದಾ ಜುಮಾ ಮಸೀದಿ, ಸಜಿಪನಡು ಕೇಂದ್ರ ಜುಮಾ ಮಸೀದಿ, ಬಂಟ್ವಾಳದ ಲೊರೆಟ್ಠೋಪದವು, ಕೆರೆಬಳಿ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್, ಸಜಿಪಮುನ್ನೂರು-ಮಲೈಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ, ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿ, ಬೋಳಿಯಾರು ಮುಹಿಯುದ್ದೀನ್ ಜುಮಾ ಮಸೀದಿ, ಸಾಂಬಾರತೋಟ ನೂರಾನಿಯಾ ಜುಮಾ ಮಸೀದಿ, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಆಲಡ್ಕ ಬದ್ರಿಯಾ ಜುಮಾ ಮಸೀದಿ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್, ಗುಡ್ಡೆಯಂಗಡಿ ನೂರುದ್ದೀನ್ ಜುಮಾ ಮಸೀದಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ,ನಂದಾವರ ಕೇಂದ್ರ ಜುಮಾ ಮಸೀದಿ, ಪಲ್ಲಮಜಲು ಬದ್ರಿಯಾ ಜುಮಾ ಮಸೀದಿ, ನೆಹರೂನಗರ ಬದ್ರಿಯಾ ಜುಮಾ ಮಸೀದಿ, ಬೋಳಂಗಡಿ ಹವ್ವಾ ಜುಮಾ ಮಸೀದಿ, ಬೋಳಂತೂರು ಹಿದಾಯತ್ ನಗರ ಬದ್ರಿಯಾ ಜುಮಾ ಮಸೀದಿ, ಮೆಲ್ಕಾರ್-ರೆಂಗೇಲು ಬದ್ರಿಯಾ ಜುಮಾ ಮಸೀದಿ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಬಡಕಬೈಲ್ ಬದ್ರಿಯಾ ಜುಮಾ ಮಸೀದಿ, ಮುಲ್ಲರಪಟ್ನ ಮುಹಿಯುದ್ದೀನ್ ಜುಮಾ ಮಸೀದಿ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ, ಆರ್ಕುಳ ರಹ್ಮಾನೀಯ ಜುಮಾ ಮಸೀದಿಗಳಲ್ಲಿ ಈದ್ ಆಚರಿಸಲಾಯಿತು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ಈದ್ ಆಚರಣೆಯೊಂದಿಗೆ ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*