www.bantwalnews.com Editor: Harish Mambady
ಗುರುವಾರ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಚಾರ್ಮಾಡಿ ಘಾಟಿ ರಸ್ತೆ ಈಗಾಗಲೇ ಬ್ಲಾಕ್ ಆಗಿದ್ದು, ಉಪ್ಪಿನಂಗಡಿಯಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುವವರು ಬಳಸುದಾರಿಯನ್ನು ಹಿಡಿಯಬೇಕು. ಏಕೆಂದರೆ ಉದನೆಯಲ್ಲಿ ನೀರು ರಸ್ತೆಗೆ ಹರಿದಿದ್ದು ಸಂಚಾರ ಬ್ಲಾಕ್ ಆಗಿದೆ.
ಗುರುವಾರ ಬೆಳಗ್ಗೆ 10.30ರವರೆಗಿನ ಸ್ಥಿತಿ ಇದು
- ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ರಸ್ತೆಗೆ ಕೆಂಪುಹೊಳೆ(ಅಡ್ಡಹೊಳೆಯ) ನೆರೆ ನೀರು ಬಂದಿದ್ದು ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ.
- ಬದಲಿ ರಸ್ತೆ ಪೆರಿಯಶಾಂತಿ .ಮರ್ದಾಳ,ಸುಬ್ರಮಣ್ಯ ಕೈಕಂಬ ಗುಂಡ್ಯ,ರಸ್ತೆ ಆಗಿರುತ್ತದೆ.
- ಶಿರಾಡಿ ಘಾಟಿಯಲ್ಲಿ ಸಂಚರಿಸಬಹುದು. ಆದರೆ ಯಾವಾಗ ಮರ ಬೀಳುತ್ತದೋ ಹೇಳಲಿಕ್ಕಾಗುವುದಿಲ್ಲ.
- ಕುಮಾರಧಾರ ಹಾಗೂ ನೇತ್ರಾವತಿ ನದಿ ನೀರು ಅಪಾಯದ ಮಟ್ಟದ ಸನಿಹದಲ್ಲಿರುವುದರಿಂದ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಪ್ರಮುಖ ಅಪಾಯ ಸ್ಥಳಗಳಲ್ಲಿ ನೋಡಲ್ ಅಧಿಕಾರಿಗಳ ಮೊಕ್ಕಾಂ ಹೂಡಲು ತಿಳಿಸಿದ್ದಾರೆ.
- ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಐದನೇ ದಿನವೂ ಮಳೆಯಾಗುತ್ತಿದೆ. ಈಗಾಗಲೇ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
- ಬಂಟ್ವಾಳದಲ್ಲಿ ನೇತ್ರಾವತಿ ನದಿ 8.15 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಸಂಭಾವ್ಯ ಅಪಾಯ ಎದುರಿಸಲು ಆಡಳಿತ ಸಿದ್ಧವಾಗಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
Be the first to comment on "ಕರಾವಳಿ ರಸ್ತೆ ಸಂಚಾರಕ್ಕೂ RED ALERT: ಅಲ್ಲಲ್ಲಿ ಬ್ಲಾಕ್, ಹೆದ್ದಾರಿ ಡೇಂಜರ್"