ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಿದ್ಧಕಟ್ಟೆ ನೇತೃತ್ವದಲ್ಲಿ ಜೂ.21ರಂದು ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿ ಸ್ವಸ್ತಿಕ್ ಸಭಾಭವನದಲ್ಲಿ ಬೆಳಗ್ಗೆ 7.30ರಿಂದ 8.30ವರೆಗೆ ಯೋಗ ಕಾರ್ಯಕ್ರಮ ನಡೆಯಲಿದೆ.
ಸಂಗಬೆಟ್ಟು ಗ್ರಾಪಂ, ಸರಕಾರಿ ಪದವಿಪೂರ್ವ ಕಾಲೇಜು ಸಿದ್ಧಕಟ್ಟೆ ಪ್ರೌಢಶಾಲಾ ವಿಭಾಗ, ರೋಟರಿ ಸಮುದಾಯ ದಳ ಸಿದ್ಧಕಟ್ಟೆ, ಸ್ವಸ್ತಿಕ ಜೈನ ಯುವಜನ ಸಂಘ ಸಿದ್ಧಕಟ್ಟೆ, ಅನಂತ ಪದ್ಮಾ ಮಹಿಳಾ ಸಂಘ ಸಿದ್ಧಕಟ್ಟೆ, ಬಂಟರ ಸಂಘ ಸಿದ್ಧಕಟ್ಟೆ ಮೊದಲಾದ ಸಂಸ್ಥೆಗಳು ಸಹಯೋಗ ನೀಡಲಿವೆ. ಆರ್ಟ್ ಆಫ್ ಲಿವಿಂಗ್ ಯೋಗಗುರು ಅನಿತಾ ಮುರಳೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಮತ್ತು ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಸಿದ್ದಕಟ್ಟೆ ಬಸದಿ ಸಭಾಭವನದಲ್ಲಿ ಯೋಗ ದಿನಾಚರಣೆ"