ಜೀವನದಲ್ಲಿ ತನ್ನ ದುಡಿಮೆಯ ಜೊತೆಗೆ ಕಷ್ಟ ಕಾರ್ಪಣ್ಯದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡುವ ಮೂಲಕ ಬದುಕು ಸಾರ್ಥಕಗೊಳಿಸಿ ನಮ್ಮನ್ನು ಅಗಲಿದ ಹಿರಿಯ ಚೇತನ ಅಬ್ದುಲ್ ಖಾದರ್ ಗೋಳ್ತಮಜಲು ಅವರ ಬದುಕು ಇತರರಿಗೆ ಮಾದರಿಯಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಹೇಳಿದ್ದಾರೆ.
ಅವರು ಗೋಳ್ತಮಜಲಿನಲ್ಲಿ ನಡೆದ ಖಾದರ್ ಹಾಜಿ ನೆನಪು ಮತ್ತು ವಿದ್ಯಾರ್ಥಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.
ಹಜಾಜ್ ಸಂಸ್ಥೆ ಪಾಲುದಾರ ಅಹ್ಮದ್ ಮುಸ್ತಾಫ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಬಡ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಕೊಡೆ ವಿತರಿಸಲಾಯಿತು.
ಸಂಸ್ಥೆ ಪಾಲುದಾರ ಜಿ.ಯೂಸುಫ್, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಝಕಾರಿಯಾ ಕಲ್ಲಡ್ಕ, ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇಂತಿಯಾಝ್, ಉಪಾಧ್ಯಕ್ಷ ಅಬ್ದುಲ್ ರಝಾಕ್, ಶಿಹಾಬುದ್ದೀನ್, ಪ್ರಮುಖರಾದ ಮಹಮ್ಮದ್ ಶರೀಫ್, ಮಹಮ್ಮದ್ ಯೂಸುಫ್ ಮತ್ತಿತರರು ಇದ್ದರು. ನಝೀರ್ ಸ್ವಾಗತಿಸಿ, ವಂದಿಸಿದರು.
Be the first to comment on "ಖಾದರ್ ಹಾಜಿ ನೆನಪು, ವಿದ್ಯಾರ್ಥಿಗಳಿಗೆ ಸವಲತ್ತು ವಿತರಣೆ"