ಬಿ.ಸಿ.ರೋಡ್ ಸೌಂದರ್ಯವೃದ್ಧಿ – ಸಂಸದ, ಶಾಸಕ ನೇತೃತ್ವದಲ್ಲಿ ಸಭೆ

ಬಿ.ಸಿ.ರೋಡ್ ಸಮಸ್ಯೆಗಳ ಕುರಿತು ಬಂಟ್ವಾಳನ್ಯೂಸ್ ಬೆಳಕು ಚೆಲ್ಲಿತ್ತು

ಈ ವರದಿಗಳನ್ನು ಓದಿರಿ

ಬಿ.ಸಿ.ರೋಡ್ ಬ್ಯೂಟಿಯಾಗಲು ನಡೆಯಲಿದೆ ಮೇಕಪ್

ಇಂದಿನ ಸುದ್ದಿ ಇಲ್ಲಿದೆ:

ಬಿ.ಸಿ.ರೋಡ್ ಪೇಟೆಯ ಅಭಿವೃದ್ಧಿಗೆ ಕಳೆದ ವರ್ಷ ರೂಪಿಸಲಾದ ಯೋಜನೆಯ ರೂಪುರೇಷೆಯ ಸಭೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆಯಿತು.

ವಿನ್ಯಾಸಗಾರ ಧರ್ಮರಾಜ್ ಯೋಜನೆಯನ್ನು ವಿವರಿಸಿದರು.ಈ ಸಂದರ್ಭ ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್, ಎಎಸ್ಪಿ ಸೈದುಲು ಅಡಾವತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ. ಉಮೇಶ್ ಭಟ್, ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗ ಹೇಗಿದೆ:

ಅಡ್ಡಾದಿಡ್ಡಿ ಪಾರ್ಕಿಂಗ್, ಅಲ್ಲಲ್ಲಿ ಕಸದ ರಾಶಿ, ಸರಿಯಾದ ಬಸ್ ನಿಲ್ದಾಣ ಇಲ್ಲದೇ ಇರುವುದು, ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ನಡೆಯುವವರಿಗೆ ಕತ್ತಲ ಭಾಗ್ಯ, ಕಂಡಕಂಡಲ್ಲಿ ಅನಧಿಕೃತ ವ್ಯಾಪಾರ, ಬೋರ್ಡ್, ಫ್ಲೆಕ್ಸ್ ಗಳು, ಆಗಾಗ್ಗೆ ಪೈಪು ಒಡೆದು ಸ್ಟೇಟ್ ಬ್ಯಾಂಕ್ ಎದುರು ನೀರು ಚೆಲ್ಲುವುದು ಹೀಗೆ ಆಧ್ವಾನಗಳ ಸರಮಾಲೆಯನ್ನೇ ಪ್ರತಿದಿನ ನೋಡುವಂತೆ ಬಿ.ಸಿ.ರೋಡ್ ಇದೆ. ಕಳೆದ ವರ್ಷ ಅಕ್ಟೋಬರ್ ೧ರ ಮೀಟಿಂಗ್‌ನಲ್ಲಿ ಅಧಿಕಾರಿಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಬಂಟ್ವಾಳನ್ಯೂಸ್ ಆಗಾಗ್ಗೆ ಬಿ.ಸಿ.ರೋಡಿನ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದನ್ನು ಗಮನಿಸಬಹುದು.

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ಬಿ.ಸಿ.ರೋಡ್ ಸೌಂದರ್ಯವೃದ್ಧಿ – ಸಂಸದ, ಶಾಸಕ ನೇತೃತ್ವದಲ್ಲಿ ಸಭೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*