ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಗಿಂತ ಅಂತರವನ್ನು ಹೆಚ್ಚಿಸಿಕೊಂಡಿದೆ. ನಳಿನ್ ಕುಮಾರ್ ಕಟೀಲ್‌ಗೆ 32,063 ಲೀಡ್ ದೊರಕಿಸಿಕೊಟ್ಟಿದೆ ಬಂಟ್ವಾಳ ಕ್ಷೇತ್ರ
ಬಿಜೆಪಿ – ನಳಿನ್ ಕುಮಾರ್ ಕಟೀಲ್ – 99188
- ಕಾಂಗ್ರೆಸ್ – ಮಿಥುನ್ ರೈ – 67,125
- ಎಸ್. ಡಿ.ಪಿ.ಐ. ಮೊಹಮ್ಮದ್ ಇಲಿಯಾಸ್ -8,818
- ನೋಟಾ – 980
- ಒಟ್ಟು 1,78,278 (ಇವುಗಳಲ್ಲಿ ಪಕ್ಷೇತರರು ಮತ್ತಿತರರ ಮತಗಳನ್ನು ನಮೂದಿಸಿಲ್ಲ)
185 ಬೂತ್ ಗಳಲ್ಲಿ ಬಿಜೆಪಿ, 64 ರಲ್ಲಿ ಕಾಂಗ್ರೆಸ್ ಲೀಡ್ ಪಡೆದಿದೆ. ಎಸ್.ಡಿ.ಪಿ.ಐ ಕೂಡ ತನ್ನ ಪ್ರಾಬಲ್ಯವಿರುವ ಬೂತ್ ಗಳಲ್ಲಿ ಗಮನಾರ್ಹ ಮತ ಪಡೆದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನ ಜನಾರ್ದನ ಪೂಜಾರಿ ಅವರಿಗಿಂತ 14,372 ಮತಗಳ ಅಂತರದಲ್ಲಿ ಈ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಕಳೆದ ವರ್ಷ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ಹಾಲಿ ಶಾಸಕರಾಗಿದ್ದ ರಮಾನಾಥ ರೈ ಅವರನ್ನು 15,971 ಮತಗಳ ಅಂತರದಿಂದ ಸೋಲಿಸಿದ್ದರು.
Be the first to comment on "ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಮತವೃದ್ಧಿ, 185 ಬೂತ್ ಗಳಲ್ಲಿ ಬಿಜೆಪಿ ಲೀಡ್"