- ಇನ್ನಾದರೂ ಜಾಗರೂಕರಾಗಿ, ನೀರಿಂಗಿಸುವ ಕೆಲಸ ಮಾಡಲು ಸಲಹೆ
ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸದ್ಯದ ಜಲಕ್ಷಾಮದ ಕುರಿತು ಹೇಳಿಕೆ ನೀಡಿದ್ದು, ಜನರಿಗೆ ಎಚ್ಚರಿಕೆ ಸಂದೇಶ ಮತ್ತು ಸಲಹೆ ನೀಡಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಮರ ಕಡಿದ ಪರಿಣಾಮ, ನೇತ್ರಾವತಿ ನದಿ ತಿರುಗುವ ಯೋಜನೆಗಳನ್ನು ರೂಪಿಸಿದ ಪರಿಣಾಮ ಏನೆಂಬುದನ್ನು ಈಗ ಅರ್ಥೈಸುವುದಕ್ಕೆ ಸಾಧ್ಯವಾಗುತ್ತದೆ. ಕರಾವಳಿಯಲ್ಲಿ ನೀರಿಲ್ಲದ ಸ್ಥಿತಿಯನ್ನು ಊಹಿಸುವುದೂ ಸಾಧ್ಯವಿಲ್ಲ. ಆದರೆ ಈಗ ಸನ್ನಿವೇಶ ಕೈಮೀರಿದೆ. ಕಾಲಮಿಂಚಿದೆ. ಇನ್ನೂ ಜಾಗರೂಕರಾಗಿರಲು ಅವಕಾಶವಿದೆ. ಪ್ರತಿಯೊಬ್ಬರೂ ಗಿಡ ನೆಡಬೇಕು. ಮರ ಬೆಳೆಸಬೇಕು. ನೀರಿಂಗಿಸುವ ಯೋಜನೆಯನ್ನು ಪ್ರತಿಯೊಬ್ಬರೂ ಜಾರಿಗೊಳಿಸಬೇಕು. ಉಷ್ಣಾಂಶ ಏರುವ ಸ್ಥಿತಿ ಮುಂದುವರೆಯಲಿರುವುದುರಿಂದ ಎಲ್ಲರೂ ನೀರನ್ನು ಹಿತಮಿತವಾಗಿ ಬಳಸಬೇಕು. ಒಂದೊಂದು ಹನಿಯನ್ನೂ ಉಳಿಸಿ, ಇತರರಿಗೆ ಉಪಕರಿಸಬೇಕು ಎಂದು ಶ್ರೀಗಳು ಸಂದೇಶ ನೀಡಿದ್ದಾರೆ.
Be the first to comment on "ಪಶ್ಚಿಮ ಘಟ್ಟಕ್ಕೆ ಕೊಡಲಿ ಇಂದಿನ ಸ್ಥಿತಿಗೆ ಕಾರಣ – ಮಾಣಿಲಶ್ರೀ"