ಮಂಗಳೂರು: ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮೇ 14ರಂದು ಕೂಡಿಯಾಟ್ಟಂ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಯಿಂದ 7ರವರೆಗೆ ಅಮ್ಮನೂರ್ ರಜನೀಶ್ ಚಾಕ್ಯಾರ್ ಮತ್ತು ಅಮ್ಮನೂರ್ ಮಾಧವ ಚಾಕ್ಯಾರ್ ತ್ರಿಶೂರ್ ಬಳಗದಿಂದ ಕೂಡಿಯಾಟ್ಟಂ (ಪ್ರಸಂಗ: ಕಲ್ಯಾಣ ಸೌಗಂಧಿಕಂ) ಪ್ರದರ್ಶನಗೊಳ್ಳಲಿದೆ.
‘ಮಿಳವು’ ವಾದನದಲ್ಲಿ ಕಲಾಮಂಡಲಂ ರವಿ ಕುಮಾರ್ ಮತ್ತು ಕಲಾಮಂಡಲಂ ರಾಹುಲ್ ಸಹಕರಿಸಲಿದ್ದಾರೆ. ಸಂಜೆ 7ಗಂಟೆಯಿಂದ 8ರವರೆಗೆ ಮಂಗಳೂರಿನ ಕಲಾವಿದೆ ರಾಧಿಕಾ ಶೆಟ್ಟಿ ಏಕವ್ಯಕ್ತಿ ಭರತನಾಟ್ಯ(ಗೋಪಿಕಾ ಪ್ರಸಾರಣ) ಪ್ರಸ್ತುತಪಡಿಸಲಿದ್ದಾರೆ. ಕಲಾವಿದೆ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು (ನಟುವಾಂಗ), ಸ್ವರಾಗ್ ಮಾಹೆ (ಹಾಡುಗಾರಿಕೆ), ಬಾಲಚಂದ್ರ ಭಾಗವತ್ ಉಡುಪಿ (ಮೃದಂಗ), ನಿತೀಶ್ ಅಮ್ಮಣ್ಣಾಯ ಬೆಂಗಳೂರು (ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ಪ್ರಕಟಣೆ ತಿಳಿಸಿದೆ.
Contact: 9845091838 or email: radhikarecitals@gmail.com
Be the first to comment on "14ರಂದು ಕೂಡಿಯಾಟ್ಟಂ, ಭರತನಾಟ್ಯ ಪ್ರದರ್ಶನ"