ಯುವ ನೃತ್ಯೋತ್ಸವ, ಭರತನಾಟ್ಯ ಕಾರ್ಯಕ್ರಮ ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಆ.5ರಂದು ಸಾಯಂಕಾಲ 5.30ಕ್ಕೆ ಜರುಗಲಿದೆ. ನೃತ್ಯಾಂಗನ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರಿನ ಯುವ ನೃತ್ಯೋತ್ಸಾಹಿ ವಿದ್ಯಾರ್ಥಿಗಳಾದ ಕಾವ್ಯಾ ಮತ್ತು ಮೇಹಾ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮಂಗಳೂರು ಹಾಗು ಆಸುಪಾಸಿನ 11 ನೃತ್ಯ ಸಂಸ್ಥೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ವೇದಿಕೆಯಲ್ಲಿ ಏಕವ್ಯಕ್ತಿ ಹಾಗೂ ಸಮೂಹ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಮಂಗಳೂರಿನಲ್ಲಿ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಆಯೋಜಿಸಲಾಗುವ ಮೊದಲ ಕಾರ್ಯಕ್ರಮವಿದು. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಒದಗಿಸುವ ಜತೆಗೆ, ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಮೂಡಿಸುವುದು ಸಂಘಟಕರಾದ ಕಾವ್ಯಾ ಮತ್ತು ಮೇಹಾ ಅವರ ಉದ್ದೇಶ. ಶ್ರೀದೇವಿ ಅನಿಲ್ ಮತ್ತು ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿ ರಾಧಿಕಾ ಶೆಟ್ಟಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
Kavya Mahesh – +91 8197788541; kmahesh0621@gmail.com
Meha Shetty – +91 8073860881 ; meashetty@gmail.com
Nrityaangan – +91 9845091838; nrityaangan@gmail.com

Be the first to comment on "ಆ.5 ರಂದು ಯುವ ನೃತ್ಯೋತ್ಸವ"