ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರಾಜ್ಯದ್ಯಾಂತ ವಿಭಿನ್ನ ಸಾಮರ್ಥ್ಯವುಳ್ಳ ಒಟ್ಟು 3683 ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 2494 ಮಕ್ಕಳು ಪಾಸ್ ಆಗಿದ್ದು, ಶೇ. 67.71 ಸಾಧನೆಯಾಗಿದೆ. ಕಲಿಕಾ ದೌರ್ಬಲ್ಯ ಹೊಂದಿರುವ ಮಕ್ಕಳು ಡಿಸ್ಲೆಕ್ಸಿಯಾ, ಆಟಿಸಂ, ಸೆರೆಬ್ರಲ್ ಪಾಲಸಿ, ಡೌನ್ ಸಿಂಡ್ರೋಮ್ ಮುಂತಾದ ಸಮಸ್ಯೆಗಳಿಂದ ಹುಟ್ಟಿನಿಂದಲೇ ಬಳಲುತ್ತಿರುತ್ತಾರೆ. ಇವರ ಬುದ್ಧಿಮತ್ತೆ ಗುಣಾಂಕ ಐಕ್ಯೂ ಸಾಮಾನ್ಯ ಮಕ್ಕಳಿಗಿಂತ ಕಡಿಮೆ. ಇಂತಹ ಮಕ್ಕಳಿಗೆ ಬಾಲ್ಯದಿಂದಲೇ ವಿಶೇಷ ತರಬೇತಿ, ಪ್ರೋತ್ಸಾಹ ಬೇಕು. ಇಂಥ ಮಕ್ಕಳ ವೈದ್ಯಕೀಯ ಪರೀಕ್ಷೆ ಹಾಗೂ ಬುದ್ಧಿಮತ್ತೆ ಪರೀಕ್ಷೆಗಳನ್ನು ಮಾಡಿಸಿ ಪ್ರಮಾಣ ಪತ್ರ ಪಡೆಯಬೇಕು. ಅದನ್ನು ಡಿಡಿಪಿಐ ಕಚೇರಿ ಮೂಲಕ ಎಸ್.ಎಸ್.ಎಲ್.ಸಿ. ಮಂಡಳಿಗೆ ಸಲ್ಲಿಸಿ, ಭಾಷಾ ವಿನಾಯಿತಿ ಪಡೆಯಬಹುದು. ಕಲಿಕಾ ಮಾಧ್ಯಮದ ಭಾಷೆ ಹೊರತು ಪಡಿಸಿ, ಇನ್ನೆರಡು ಭಾಷೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ.
ಇಂಥ ಮಕ್ಕಳಿಗೆ ಕೆಲವು ವಿನಾಯತಿ ಪಡೆಯುವ ಅವಕಾಶವಿರುತ್ತದೆ. ನಿಯಮಾನುಸಾರ ಅಂಥ ವಿಶೇಷ ಸೌಲಭ್ಯವನ್ನು ಶಿಕ್ಷಣ ಮಂಡಳಿಯಿಂದ ಪಡೆಯಲಾಗಿತ್ತು. ಆದರೆ, ಯಾವುದೇ ರೀತಿಯ ಕೀಳರಿಮೆ ಬಾರದಂತೆ ಶಾಲೆಯಲ್ಲಿ ನಿಗಾ ವಹಿಸುವುದು ಬಹಳ ಮುಖ್ಯ ಶಾಲೆಯಲ್ಲಾಗಲಿ, ಸರಕಾರದಿಂದಾಗಲಿ ಇಂಥ ಮಕ್ಕಳಿಗೆ ವಿಶೇಷ ತರಬೇತು ನೀಡುವ ವ್ಯವಸ್ಥೆ ಇಲ್ಲ. ಶಾಲೆಯ ಸಹಕಾರದೊಂದಿಗೆ ಪೋಷಕರ ಪರಿಶ್ರಮದಿಂದ ಮಾತ್ರ ಇಂಥ ಮಕ್ಕಳು ಗುರಿ ತಲುಪಬಹುದು.
Be the first to comment on "ರಾಜ್ಯದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳ ಉತ್ತಮ ಸಾಧನೆ"