ಅನಿವಾರ್ಯವಾದರೆ ಮಾತ್ರ ಶ್ರೀಲಂಕಾಕ್ಕೆ ಪ್ರವಾಸ ಮಾಡಿ ಎಂದು ಭಾರತಯ ಸರಕಾರ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಲಂಕಾದಲ್ಲಿ ನಡೆಯುತ್ತಿರುವ ಉಗ್ರ ದಾಳಿ ಮತ್ತು ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಸುರಕ್ಷತಾ ಸಲಹೆ ನೀಡಿದೆ.
ಶನಿವಾರ ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ಮುಂಜಾಗ್ರತಾ ಮಾರ್ಗದರ್ಶಕ ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಉಗ್ರ ದಾಳಿ ಮತ್ತು ಅದರ ವಿರುದ್ಧದ ಶ್ರೀಲಂಕಾ ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಅಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಈ ಪರಿಸ್ಥಿತಿ ಶ್ರೀಲಂಕಾಗೆ ಅನವಶ್ಯಕ ಪ್ರಯಾಣ ಬೇಡ ಎಂದು ಹೇಳಿದೆ.
ಕಳೆದ ಈಸ್ಚರ್ ಸಂಡೇಯಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ್ದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ 253 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಲ್ಲದೆ ಇದಾದ ಬೆನ್ನಲ್ಲೇ ಶ್ರೀಲಂಕಾ ಸೇನೆ ಶುಕ್ರವಾರದಿಂದ ಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು, 6 ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಲಂಕಾದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಅನಿವಾರ್ಯವಾದರೆ ಮಾತ್ರ ಲಂಕಾ ಪ್ರವಾಸ ಮಾಡಿ: ಸರಕಾರ ಸೂಚನೆ"