
ಇವರಿಗೆ ಎರಡು ಕೈಗಳಿಲ್ಲ. ಕಾಲಿನಿಂದಲೇ ಓಟ್ ಹಾಕಿ ಮಾದರಿಯಾಗಿದ್ದಾರೆ ಈ ದಿಟ್ಟ ಮಹಿಳೆ. ಹೆಸರು ಸಬಿತಾ ಮೊನೀಶ್. ಗರ್ಡಾಡಿ ಬೂತ್ ನಲ್ಲಿ ತನ್ನ ಹಕ್ಕು ಚಲಾಯಿಸಿದ ಸಬಿತಾ ಕೈಗಳೇ ಇಲ್ಲದಿದ್ದರೂ ಮತಗಟ್ಟೆಗೆ ಬಂದು ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಕಾಲಿನಿಂದಲೇ ಪರೀಕ್ಷೆ ಬರೆದು ಎರಡು ಉನ್ನತ ಪದವಿ ಪಡೆದ ಕೀರ್ತಿಯೂ ಇವರಿಗೆ ಲಭಿಸಿತ್ತು. ವಿದ್ಯಾವಂತರು, ದೃಢಕಾಯರೆನಿಸಿಕೊಂಡವರು ಬೆಟ್ಟ, ಗುಡ್ಡ, ರೆಸಾರ್ಟ್ ಗಳಲ್ಲಿ ಜಾಲಿ ಟ್ರಿಪ್ ಮಾಡುತ್ತಾ ಓಟು ಹಾಕುವುದನ್ನು ಮರೆತು ಕನಿಷ್ಠ ಮತದಾನದ ದಾಖಲೆಗೆ ಕಾರಣರಾಗುತ್ತಿದ್ದರೆ, ಸಬಿತಾ ಕಾಲಿನಿಂದಲೇ ಮತ ಚಲಾಯಿಸಿ ಮಾದರಿ ಎನಿಸಿದ್ದಾರೆ.

ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127


Be the first to comment on "ಎರಡು ಕೈಗಳಿಲ್ಲದಿದ್ದರೇನಾಯಿತು? ಕಾಲಿನಿಂದಲೇ ಮತ ಚಲಾಯಿಸಿದ ದಿಟ್ಟೆ"