ಏ.7ರಂದು ಕಳ್ಳಿಗೆಯಲ್ಲಿ ಶ್ರೀರಾಮ ನಾಮ ತಾರಕ ಜಪಯಜ್ಞ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಲೋಕಕಲ್ಯಾಣಾರ್ಥವಾಗಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ  ಪೆರಿಯೋಡಿಬೀಡಿನ ಬಾಕಿಮಾರುಗದ್ದೆಯಲ್ಲಿ ಏ.7 ರಂದು ಕಶೆಕೋಡಿ ಸೂರ್ಯ ನಾರಾಯಣ ಭಟ್ ನೇತೃತ್ವದಲ್ಲಿ ಶ್ರೀ ರಾಮನಾಮತಾರಕ ಜಪ ಯಜ್ಙ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ತಿಳಿಸಿದ್ದಾರೆ.

ರುವಾರ ಸಂಜೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡಿನ ಬಾಕಿಮಾರು ಗದ್ದೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಅವರು, ಕಳ್ಳಿಗೆ, ತುಂಬೆ,ಪುದು,ಕೊಡ್ಮಾಣ್,ಮೇರಮಜಲು ಸೇರಿ ಐದು ಗ್ರಾಮಗಳನ್ನೊಳಗೊಂಡು ಶ್ರೀ ರಾಮನಾಮತಾರಕ ಜಪಯಜ್ಙ ವನ್ನು ಆಯೋಜಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಐದು ಗ್ರಾಮಗಳನ್ನು ಸೇರಿಸಿಕೊಂಡು ಈ ಕಾರ್ಯ ಕ್ರಮ ಆಯೋಜಿಸಲಾಗುತ್ತಿದೆ  ಎಂದರು.

ಈ ಯಾಗದಲ್ಲಿ 5 ಗ್ರಾಮಗಳ ಪರಿಸರದ ಪ್ರತಿಯೊಂದು ಹಿಂದುಗಳು ತಮ್ಮ ಮನೆಗಳಲ್ಲಿ 21 ದಿನಗಳಲ್ಲಿ ರಾಮನಾಮತಾರಕ ಜಪನಡೆಸಿ ಒಟ್ಟು ಕೋಟಿ ಜಪಮಾಡುವ ಸಂಕಲ್ಪ ಮಾಡಿದ್ದು,  ಈಗಾಗಲೇ ನೋಂದಣಿಯಾಗಿರುವ 432 ಕುಟುಂಬಗಳಿಗೆ 4 ಅವೃತ್ತಿಯಲ್ಲಿ ಯಜ್ಙಕ್ಕೆ ಹವಿಸ್ಸು ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಜಾಹೀರಾತು

ಸುಮಾರು 3600 ಚದರ ಅಡಿಯ ವಿಸ್ತೀರ್ಣದ ಅಂತರ ಚಪ್ಪರದ ಸಂಪ್ರಾದಾಯಿಕ ಯಜ್ಞ ಮಂಟಪ, ದಶಾವತಾರ ನೆನಪಿಸುವ 10 ಯಜ್ಞ ಕುಂಡಗಳು, 432 ದೀಕ್ಷಿತರಿಂದ ವೈದಿಕ ಸಹಕಾರದೊಂದಿಗೆ ಯಜ್ಞ ಸಂಪನ್ನಗೊಳ್ಳಲಿದ್ದು, ಸುಮಾರು 7 ಸಾವಿರ ರಾಮಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಒಂದು ಎಕ್ಷೆ ಪ್ರದೇಶದಲ್ಲಿ ಸಭಾಂಗಣ, ಊಟೋಪಚಾರ , ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ಫರಂಗಿಪೇಟೆ ವರದೇಶ್ವರ ದೇವಸ್ಥಾನದಿಂದ ಕಳ್ಳಿಗೆ ಬೀಡುವಿಗೆ ಹಸಿರುಹೊರೆಕಾಣಿಕೆ ಸಮರ್ಪಣೆಯ ಶೋಭಾಯಾತ್ರೆಯು ಎಪ್ರಿಲ್ 5 (ಶುಕ್ರವಾರ) ರಂದುಸಂಜೆ 4 ಗಂಟೆಗೆ ಹೊರಡಲಿದೆ  ಏ.6 ರಂದು ಯುಗಾದಿಯ ಪ್ರಯುಕ್ತ 5 ಗ್ರಾಮಗಳಲ್ಲಿ ವಿಶೇಷ ಸಾಮೂಹಿಕ ರಾಮನಾಮಜಪ,ಸಂಜೆ ವೈಧಿಕ ಕಾರ್ಯಕ್ರಮ ನಡೆಯುವುದು ,ಏ.7 ರಂದು ಬೆಳಿಗ್ಗೆ ಯಜ್ಞಾರಂಭ, ಪೂರ್ಣಾಹುತಿ, ಮಂಗಳಾರತಿ ನಂತರ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸುಧರ್ಮ ಸಭೆಯಲ್ಲಿ ಆಧ್ಯಾತ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ಶ್ರೀ ರಾಮ ಪಥದರ್ಶನದ ಮಾಡಲಿದ್ದಾರೆ. ಮಧ್ಯಾಹ್ನ  ಅನ್ನಸಂತರ್ಪಣೆಯ ನಂತರ ಪುತ್ತೂರು ಜಗದೀಶ್ ಆಚಾರ್ಯರವರಿಂದ ಭಕ್ತಿಗಾನ ವೈಭವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ದಾಮೋದರ ನೆತ್ತರಕೆರೆ,ವಿವಿಧ ಸಮಿತಿ ಪ್ರಮುಖರಾದ ದೇವಸ್ಯ ಪ್ರಕಾಶ್‌ಚಂದ್ರ ರೈ, ಎಂ. ಆರ್. ನಾಯರ್, ಪ್ರವೀಣ್ ಜ್ಯೋತಿಗುಡ್ಡೆ, ಪದ್ಮನಾಭ ರಾವ್, ದಯಾನಂದ ಜಾರಂದಗುಡ್ಡೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಶ್ರೀಕಾಂತ್, ಚೇತನ್ ಮುಂಡಾಜೆ ,ಪದ್ಮನಾಭ ಶೆಟ್ಟಿ ಪುಂಚಮೆ,ಮಾಧವ ವಳವೂರು,ಸಂತೋಷ್ ಕೊಡ್ಮಾಣ್,ಮನೋಹರ ಕಂಜತ್ತೂರು,ಯೋಗೀಶ್ ಕುಮ್ಡೇಲು ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಏ.7ರಂದು ಕಳ್ಳಿಗೆಯಲ್ಲಿ ಶ್ರೀರಾಮ ನಾಮ ತಾರಕ ಜಪಯಜ್ಞ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*