ಸುಧೀರ್ ಶ್ಯಾನುಭಾಗ್ ಬರೆದು ನಿರ್ದೇಶಿಸಿದ್ದಾರೆ ಅನಂತು v/s ನುಸ್ರತ್ ಕಹಾನಿ

  • ಡಾ. ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಚಿತ್ರ 28ರಂದು ತೆರೆಗೆ

www.bantwalnews.com

ಅನಂತು v/s ನುಸ್ರತ್

ಸ್ಯಾಂಡಲ್ ವುಡ್ ಅಷ್ಟೇ ಅಲ್ಲ,  ಕಡಲ ತಡಿಯಲ್ಲೂ ಈ ಹೆಸರಿನ ತಂಗಾಳಿ ಬೀಸತೊಡಗಿದೆ. ಡಾ.ರಾಜ್ ಕುಮಾರ್ ಮೊಮ್ಮಗ, (ರಾಘವೇಂದ್ರ ರಾಜ್ ಕುಮಾರ್ ಮಗ) ವಿನಯ್ ರಾಜ್ ಕುಮಾರ್ ಅವರಿಗೆ ದೊಡ್ಡ ಬ್ರೇಕ್ ಅನ್ನು ಈ ಚಿತ್ರ ನೀಡಲಿದೆ ಎಂಬುದು ಇದರ ಟ್ರೈಲರ್ ನೋಡಿದಾಗ ಗೊತ್ತಾಗುತ್ತದೆ. ಇದು ಸುಧೀರ್ ಶ್ಯಾನುಭೋಗ್ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ.

ತುಳು ಸಿನಿಮಾ ಜೊತೆಗಿನ ಒಡನಾಟ, ಹಿನ್ನೆಲೆಯನ್ನಿಟ್ಟುಕೊಂಡು ಮುಂದಡಿ ಇಟ್ಟಿರುವ ಸುಧೀರ್, ಇಲ್ಲಿ ಕಿರಿಯ ವಯಸ್ಸಿನ ಜಡ್ಜ್ ಮತ್ತು ಲಾಯರ್ ನಡುವಿನ ಪ್ರೇಮಕಹಾನಿಯನ್ನು ತೆರೆಯ ಮೇಲೆ ತರಲಿದ್ದಾರೆ.

ಅಂದ ಹಾಗೆ ಹೇಗೆ ಸುಧೀರ್ ರಾಜ್ ಕ್ಯಾಂಪ್ ಪ್ರವೇಶಿಸಿದರು?

ವಿನಯ್ ರಾಜ್ ಕುಮಾರ್ ಅವರಿಗೆ ದೊಡ್ಡ ಬ್ರೇಕ್ ಕೊಡಬೇಕು, ಸದಭಿರುಚಿಯ ನವುರಾದ ಕಥೆಯುಳ್ಳ ಚಿತ್ರವೊಂದು ಆಗಬೇಕು ಎಂಬುದು ರಾಜ್ ಕ್ಯಾಂಪ್ ಆಸೆಯಾಗಿತ್ತು. ಅದಕ್ಕಾಗಿ ಹಲವು ಸ್ಕ್ರಿಪ್ಟ್ ಗಳ ಹುಡುಕಾಟ ನಡೆಯುತ್ತಿತ್ತು. ಈ ಸಂದರ್ಭ ಸುಧೀರ್ ಶ್ಯಾನುಭೋಗ್ ಬರೆದ ಕಥೆ ಅವರ ಮನಸೆಳೆಯಿತು. ಕಡಲತಡಿ ಮಂಗಳೂರು ಸಮೀಪ ಬಂಟ್ವಾಳದ ಎಸ್.ವಿ.ಎಸ್.ಶಾಲೆ ಹಳೇ ವಿದ್ಯಾರ್ಥಿ ಸುಧೀರ್ ಮೂಲತಃ ನೆಟ್ವರ್ಕ್ ಇಂಜಿನಿಯರ್. ಆದರೆ ಸಿನಿಮಾ ಆಸಕ್ತಿ ಬೇಗನೆ ಅದರೆಡೆ ಸೆಳೆಯುವಂತೆ ಮಾಡಿತು. ಟಿ.ವಿ.ಧಾರಾವಾಹಿಗಳು ಪ್ಲಾಟ್ ಫಾರ್ಮ್ ಒದಗಿಸಿದವು. ಅವರು ಬರೆದ ಕತೆಯಾಧರಿತ ತುಳು ಸಿನಿಮಾ ಮದಿಪು ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಮತ್ತಷ್ಟು ಹುಮ್ಮಸ್ಸು ಕೊಟ್ಟಿತು. ಈ ವೇಳೆ ರಾಜ್ ಕುಟುಂಬ ಸೂಕ್ತ ಚಿತ್ರಕತೆ ಆಯ್ಕೆಯ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದದ್ದು ಸುಧೀರ್.

ಹೀಗೆ ಮಾಣಿಕ್ಯ ಪ್ರೊಡಕ್ಷನ್ ನಿರ್ಮಾಣದಲ್ಲಿ ಅನಂತು v/s ನುಸ್ರತ್  ಚಿತ್ರ ಕಥೆ ಬರೆದು ನಿರ್ದೇಶಿಸಲು ಸುಧೀರ್ ಗೆ ಹೊಣೆಗಾರಿಕೆ ದೊರಕಿತು. ತನ್ನ ಚಿತ್ರ ದ ಮೂಲಕ ಪ್ರೀತಿ ಮತ್ತು ಮಾನವೀಯ ಸಂಬಂದ ಗಳ ಜೊತೆಗೆ ಹಿಂದೂ ಮುಸ್ಲಿಂ ಸಾಮರಸ್ಯದ ಸಂದೇಶ ಕೊಡಲು ಹೊರಟಿರುವ ಈ ಉದಯೋನ್ಮುಖ ನಿರ್ದೇಶಕನ ಚಿತ್ರ ,ಕನ್ನಡ ಚಲನ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.

ವಿನಯ್ ರಾಜ್ ಕುಮಾರ್ ಅನಂತುವಾಗಿ, ಲತಾ ಹೆಗಡೆ ನುಸ್ರತ್ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಭಗವಾನ್ , ಕಾಮಿಡಿ ಕಿಲಾಡಿ ನಯನ, ನವೀನ್ ಡಿ. ಪಡೀಲ್ ಸಹಿತ ಪ್ರಮುಖರು ತಾರಾಗಣದಲ್ಲಿದ್ದಾರೆ.

ಈಗ ಚಿತ್ರದ ಟೀಸರ್ ವೀಕ್ಷಕರ  ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ವಿನಯ್ ಕುಮಾರ್ ವಕೀಲ ಅನಂತ ಕೃಷ್ಣ ಕ್ರಮದಾರಿತ್ಯ  ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಜಡ್ಜ್ ನುಸ್ರತ್  ಪಾತಿಮಾ ಬೇಗ್ ಪಾತ್ರದಲ್ಲಿ ಲತಾ ಹೆಗಡೆ ಅಭಿನಯಿಸಿದ್ದಾರೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದು,  ಚಿತ್ರದ ಟೀಸರ್ ಕೂಡಾ ಅನಂತು ಮತ್ತು ನುಸ್ರತ್ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಪಾತ್ರಗಳು ಹಾಗೂ ಘಟನೆಗಳನ್ನು ಕುತೂಹಲದಿಂದ ಜೋಡಿಸಿ ನಿರ್ದೇಶಕರು ಚಿತ್ರ ಮಾಡಿದ್ದಾರೆ.

ಮಾಣಿಕ್ಯ ಪ್ರೊಡಕ್ಷನ್ ನಡಿಯಲ್ಲಿ  ತಯಾರಾಗಿರುವ ಚಿತ್ರ ಡಿ.28ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಅಭಿಷೇಕ್ ಕಾಸರಗೊಡು  ಅವರ ಛಾಯಾಗ್ರಹಣವಿದ್ದು,  ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಸುಧೀರ್ ಶ್ಯಾನುಭಾಗ್ ಬರೆದು ನಿರ್ದೇಶಿಸಿದ್ದಾರೆ ಅನಂತು v/s ನುಸ್ರತ್ ಕಹಾನಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*