ಹಬ್ಬಗಳು ಎಂದರೆ ಮಕ್ಕಳಿಗೆ ಸಂತೋಷ ಗೊಳಿಸುವುದು .ಶ್ರಮದ ಹಣದಲ್ಲಿ ಮಕ್ಕಳಿಗೆ ಬೇಕಾದ ಪಟಾಕಿ ಸಿಡಿಸಿ ಅವರ ಬಾಳು ಬೆಳಗಿಸುವ ಬದಲು ನಂದಿಸುವ ಘಟನೆ ನಡೆಯುತ್ತದೆ. ಪರಿಸರ, ಗಾಳಿ, ಮಣ್ಣು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪಟಾಕಿ ಸಿಡಿಸುವ ಬದಲು ಹಣತೆಯ ಮೂಲಕ ದೀಪಗಳ ಹಬ್ಬ ದೀಪಾವಳಿ ಮಕ್ಕಳ ಬದುಕನ್ನು ಬೆಳಗಲಿ ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಮಂಗಳವಾರ ನಡೆದ ದೀಪಾವಳಿ ಆಚರಣೆ ಮಗುಸ್ನೇಹಿ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ವಲಯ 4ರ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ಕಾರ್ಯದರ್ಶಿ ನಾರಾಯಣ ಹೆಗ್ಡೆ,ಉಪಸ್ತಿತರಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷರಾದ ಆಶಾಮಣಿ ಡಿ ರೈ ನೇತೃತ್ವದಲ್ಲಿ ಪದಾಧಿಕಾರಿಗಳು ಹಣತೆ ಬೆಳಗಿಸಿ ದೀಪಾವಳಿ ಹಬ್ಬದ ಸಂಭ್ರಮ ಆಚರಿಸಿದರು.
Be the first to comment on "ರೋಟರಿಯಿಂದ ಮಗುಸ್ನೇಹಿ ದೀಪಾವಳಿ ಸಂಕಲ್ಪ"