- ಅನಿಲ್ ಎಚ್. ಟಿ
ಈ ಜಾಗದಲ್ಲಿ ಎಲ್ಲಾ ಧರ್ಮೀಯರೂ ಮನೆ ಕಟ್ಟಿ ವಾಸಿಸಿದರೆ ಸಾರ್ಥಕ.
ಹೀಗನ್ನುವವರು ಕೊಡಗಿನ ಗುಡ್ಡೆಹೊಸೂರು ಕ್ಷೇತ್ರದ ಜಿಪಂ ಸದಸ್ಯ. ಹೆಸರು ಪಿ.ಎಂ.ಲತೀಫ್. ಕಳೆದ ಎರಡು ತಿಂಗಳ ಹಿಂದೆ ಕೊಡಗಿನಲ್ಲಿ ಏನೇನು ಆಗಿದೆ ಎಂಬುದು ನಿಮಗೆ ಗೊತ್ತೇ ಇದೆ. ಈಗ ನಿರಾಶ್ರಿತರಿಗಾಗಿ ಮಿಡಿದಿರುವ ಲತೀಫ್ ತನ್ನ ಒಂದು ಎಕರೆ ಜಾಗವನ್ನೇ ಮನೆ ಕಟ್ಟಿಕೊಡಲೆಂದು ದಾನ ಮಾಡಿದ್ದಾರೆ. ಈ ಭೂಮಿಗೆ ಲಕ್ಷಾಂತರ ರೂ ಮೌಲ್ಯವಿದೆ. ಆದರೆ ನೊಂದವರಿಗೆ ಮನೆ ಕಟ್ಟಿಕೊಡಲಷ್ಟೇ ನಾನು ಭೂಮಿ ನೀಡುತ್ತಿದ್ದೇನೆ. ಸರ್ವಧರ್ಮೀಯರೂ ಒಟ್ಟಾಗಿ ಇಲ್ಲಿ ವಾಸಿಸಬೇಕು ಎಂಬುದು ನನ್ನಾಸೆ ಎನ್ನುತ್ತಾರೆ ಲತೀಫ್.
ಸುನ್ನಿ ಯುವಜನ ಸಂಘಕ್ಕೆ ಲತೀಫ್ ದಾನ ಮಾಡಿದ್ದಾರೆ. ತನ್ನ ಮಾರ್ಗದರ್ಶಕರಾದ ಎ.ಪಿ.ಅಬುಬಕ್ಕರ್ ಮುಸ್ಲಿಯಾರ್ ಸಲಹೆ ಮೇರೆಗೆ ನಿರಾಶ್ರಿತರಿಗೆ ಕನಿಷ್ಠ 25 ಮನೆಗಳನ್ನಾದರೂ ನಿರ್ಮಿಸಬೇಕು ಎಂಬ ಉದ್ದೇಶದಿಂದ ದಾನವಾಗಿ ನೀಡಿದೆ ಎನ್ನುತ್ತಾರೆ ಲತೀಫ್. ಪ್ರಕೃತಿ ವಿಕೋಪ ಸಂದರ್ಭ ಅವರು ಮತ್ತವರ ತಂಡ ಹಲವರನ್ನು ಸುರಕ್ಷಿತ ಜಾಗಕ್ಕೆ ಕರೆತಂದಿದ್ದರು. ಕುಶಾಲನಗರ, ಸುಂಟಿಕೊಪ್ಪ ಪರಿಸರದಲ್ಲಿ ಲತೀಫ್ ಸಮಾಜಸೇವೆಗೆ ಇನ್ನೊಂದು ಹೆಸರು.
(ಅನಿಲ್ ಎಚ್. ಟಿ, ಹಿರಿಯ ಪತ್ರಕರ್ತರು, ಮಡಿಕೇರಿ.)
Be the first to comment on "ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಲಕ್ಷಾಂತರ ರೂ ಮೌಲ್ಯದ ಜಾಗ ದಾನ ನೀಡಿದ ಜಿಪಂ ಸದಸ್ಯ"