ಬಂಟ್ವಾಳ ಎಪಿಎಂಸಿಯ ಎರಡನೇ ಅವಧಿಯ 20 ತಿಂಗಳ ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಚುನಾವಣೆ ಅ.15 ರಂದು ಎಪಿಎಂಸಿ ಕಚೇರಿಯಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.
ಮೊದಲ 20 ತಿಂಗಳ ಅವಧಿಗೆ ನಾಮನಿರ್ದೇಶಿತರ ಬೆಂಬಲದಿಂದ ಕಾಂಗ್ರೆಸ್ ನ ಪದ್ಮನಾಭ ರೈ ಅಧ್ಯಕ್ಷರಾಗಿ,ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷರಾಗಿದ್ದರು.ಇವರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಮುಂದಿನ ಎರಡನೇ ಅವಧಿಗೆ ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
13 ಸದಸ್ಯ ಬಲವನ್ನು ಹೊಂದಿರುವ ಬಂಟ್ವಾಳ ಎಪಿಎಂಸಿಯಲ್ಲಿ 7 ಬಿಜೆಪಿ,6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ರಾಜ್ಯದಲ್ಲಿ ಸರಕಾರ ಬದಲಾವಣೆಯ ಹಿನ್ನಲೆಯಲ್ಲಿ ಈ ಹಿಂದಿನ ಮೂವರು ನಾಮನಿರ್ದೇಶಿತರ ಅವಧಿಯು ಮುಗಿದಿದ್ದು, ಸದ್ಯ ನೂತನ ನಾಮನಿರ್ದೇಶಿತ ಸದಸ್ಯರ ಆಯ್ಕೆ ಆಗಿಲ್ಲ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "15ರಂದು ಎಪಿಎಂಸಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ"