
ಮುಡಿಪುವಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಕಲ್ಲೂರು ಎಜುಕೇಷನ್ (ರಿ) ಕಾರವಾರ ಆಶ್ರಯದಲ್ಲಿ ಯೂತ್ ರೆಡ್ ಕ್ರಾಸ್ ಹಾಗೂ ರೋಜರ್ಸ್/ ರೇಂಜರ್ಸ್ ಘಟಕದ ಸಹಯೋಗದಲ್ಲಿ ರಕ್ತದಾನ ಶಿಬಿರ, ದಂತ ತಪಾಸಣೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ ಎಸ್ ಗಟ್ಟಿ ಗಣ್ಯರ ಸಮಕ್ಷಮ ಗಿಡಕ್ಕೆ ನೀರು ಹಾಯಿಸಿ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶಪಾಲರಾದ ಸತೀಶ್ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ದಂತ ಚಿಕಿತ್ಸಾಧಿಕಾರಿ ಡಾ. ಭರತ್ ಕುಮಾರ್., ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದಂತ ಚಿಕಿತ್ಸಾ ವಿಭಾಗದ ಡಾ.ರಿಯಾಝ್ , ಡಾ. ಹಾರಿಕಾ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕಲ್ಲೂರು ಎಜುಕೇಶನ್ ಟ್ರಸ್ಟ್ ಕಾರವಾರ ಅಧ್ಯಕ್ಷ ಇಬ್ರಾಹಿಂ ಹಾಜಿ ಕಲ್ಲೂರು ಮಾತನಾಡಿ, ಒಂದು ಸಲ ರಕ್ತದಾನ ಮಾಡಿದರೆ ನಾಲ್ಕು ಜೀವಗಳನ್ನು ಉಳಿಸಲು ಸಹಕಾರಿ ಆಗುತ್ತದೆ ಎಂದು ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಅಲ್ಪೋನ್ಸ್ ಕುಟಿನ್ಹ , ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ ಶೇಷಪ್ಪ ಕೆ ಅಮೀನ್, ಆಂತರಿಕ ಗುಣಮಟ್ಟ ವಿಭಾಗದ ಕವಿತಾ ಎಂ ಎಲ್, ರೋವರ್ಸ್ ಘಟಕ ಸಂಚಾಲಕ ಮಹಮ್ಮದ್ ರಫೀಕ್, ರೇಂಜರ್ಸ್ ಘಟಕ ಸಂಚಾಲಕಿ ಅಕ್ಷತಾ ಸುವರ್ಣ, ಎನ್ನೆಸ್ಸೆಸ್ ಘಟಕ ಸಂಚಾಲಕರಾದ ತನುಜಾ, ಕಲ್ಲೂರು ಟ್ರಸ್ಟ್ ಟ್ರಸ್ಟಿ ಇಜನಾಬ್ ಅಝೀಝ್ ಕಲ್ಲೂರು. ಟ್ರಸ್ಟ್ ಮಾಧ್ಯಮ ವಿಭಾಗ ಸಂಚಾಲಕ ಉಮ್ಮರ್ ಸಾಲೆತ್ತೂರು, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಸ್ಥಳೀಯ ಉಪನ್ಯಾಸಕ ಪ್ರೊ. ಹೈದರಾಲಿ, ಯೆನೆಪೊಯ ಮೆಡಿಕಲ್ ಕಾಲೇಜಿನ ಲಕ್ಷ್ಮೀಶ ಮುಡಿಪು ಉಪಸ್ಥಿತರಿದದ್ದರು ವಿದ್ಯಾರ್ಥಿನಿ ಬಿಂದುಶ್ರೀ ಕಾರ್ಯಕ್ರಮ ನಿರ್ವಹಿಸಿದರು.. ವಿದ್ಯಾರ್ಥಿನಿ ಶ್ರೇಯಾ ವಂದಿಸಿದರು.


Be the first to comment on "ಮುಡಿಪು: ರಕ್ತದಾನ ಶಿಬಿರ, ಹಲ್ಲು ತಪಾಸಣೆ, ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಕಾರ್ಯಾಗಾರ"