ಆ. 29ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಂಟ್ವಾಳ ಪುರಸಭೆಗೆ ಎಸ್‌ಡಿಪಿಐಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ವಿಧಾನ ಸಭಾ ಕ್ಷೇತ್ರ ಸಮಿತಿ ಮತ್ತು ಚುನಾವಣಾ ಸಮಿತಿಯ ಜಂಟಿ ಸಭೆಯಲ್ಲಿ ಶನಿವಾರ ರಾತ್ರಿ ಬಿಡುಗಡೆ ಮಾಡಲಾಯಿತು.

BASHEER PALLA (SDPI)
ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮೊದಲ ಪಟ್ಟಿಯಲ್ಲಿ ಆಯ್ಕೆಗೊಂಡ 7 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು.

MONISH ALI (SDPI)
ವಾರ್ಡ್-8(ಬಂಟ್ವಾಳ) ಮುನೀಶ್ ಅಲಿ, ವಾರ್ಡ್-13(ಗೂಡಿನಬಳಿ)-ಸಂಶಾದ್, ವಾರ್ಡ್-14 (ಗೂಡಿನಬಳಿ) ಝೀನತ್ ಫಿರೋಝ್, ವಾರ್ಡ್-೧೬ (ಪರ್ಲ್ಯ ನಂದರಬೆಟ್ಟು)-ಶಾಹುಲ್ ಹಮೀದ್ ಎಸ್.ಎಚ್, ವಾರ್ಡ್-೧೭ (ಮದ್ದ) ಇಕ್ಬಾಲ್ ಮದ್ದ, ವಾರ್ಡ್-೧೮ (ಕೈಕಂಬ)-ಬಶೀರ್ ಪಲ್ಲ, ವಾರ್ಡ್-೧೯ (ಶಾಂತಿ ಅಂಗಡಿ)- ಇಶಾಕ್ ಅದ್ದೇಡಿ ಪಕ್ಷದ ಅಭ್ಯರ್ಥಿಗಳು.

ISAC S.A. (SDPI)
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ, ಪ್ರಥಮ ಪಟ್ಟಿಯಲ್ಲಿ ೭ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಂಡಿದ್ದು, ಇನ್ನುಳಿದ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಇಂದಿನಿಂದಲೇ ಮನೆ ಮನೆಗೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.

IQBAL (SDPI)
ಸಭೆಯಲ್ಲಿ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಚುನಾವಣಾ ಸಹ ವೀಕ್ಷಕ ಇಜಾಝ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್, ಉಪಾಧ್ಯಕ್ಷ ಇಕ್ಬಾಲ್, ಪುರಸಭಾ ಸಮಿತಿಯ ಅಧ್ಯಕ್ಷ ಮುನೀಶ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

SHAHUL HAMEED (SDPI)


Be the first to comment on "ಬಂಟ್ವಾಳ ಪುರಸಭಾ ಚುನಾವಣೆ: ಎಸ್‌ಡಿಪಿಐ ಪ್ರಥಮ ಪಟ್ಟಿ ಬಿಡುಗಡೆ"