ಮುಸ್ಲಿಂ ಸಮಾಜ ಬಂಟ್ವಾಳ ವತಿಯಿಂದ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರವು ಆ. 15ರಂದು ಸಂಜೆ ೪ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ನಡೆಯಲಿದೆ.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಮುಸ್ಲಿಂ ಸಮಾಜ ಬಂಟ್ವಾಳ ಅಧ್ಯಕ್ಷ ಇಬ್ನು ಅಬ್ಬಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಜಾಹೀರಾತು
ಗೌರವಾಧ್ಯಕ್ಷ ಬಿ.ಎಚ್.ಖಾದರ್ ಉಪಸ್ಥಿತರಿರುವರು. “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ” ಎಂಬ ವಿಷಯದ ಕುರಿತು ಮೇಲಂಗಡಿ ಖತೀಬ್ ಯೂಸುಫ್ ಮಿಸ್ಬಾಹಿ ಹಾಗೂ ಲೇಖಕ ಇಸ್ಮಾತ್ ಫಜೀರ್ ಅವರು ಮಾಹಿತಿ ನೀಡುವರು ಎಂದು ಸಂಘದ ಪ್ರಕಟನೆ ತಿಳಿಸಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆ. 15ರಂದು ಮುಸ್ಲಿಂ ಸಮಾಜ ಬಂಟ್ವಾಳ ವತಿಯಿಂದ ಅಭಿನಂದನಾ ಸಮಾರಂಭ"