ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗೆ ಹೆದ್ದಾರಿ ಹದಗೆಟ್ಟಿದ್ದು, ಸಂಚಾರ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಪೊಲೀಸ್ ಮುತುವರ್ಜಿಯಲ್ಲಿ ಹೆದ್ದಾರಿ ಕಾಮಗಾರಿ ನಿರ್ವಹಣೆ ನಡೆಸುತ್ತಿರುವ ಎಲ್.ಆಂಡ್ ಟಿ ಕಂಪನಿಯವರು ಶುಕ್ರವಾರ ಬೆಳಗ್ಗೆ ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿದರು.
ಜಾಹೀರಾತು
ಟ್ರಾಫಿಕ್ ಎಸ್.ಐ. ಎಲ್ಲಪ್ಪ ಮಾರ್ಗದರ್ಶನದಲ್ಲಿ ಎಎಸ್ಐ ಬಾಲಕೃಷ್ಣ, ಸಿಬ್ಬಂದಿಗಳಾದ ರಾಜು, ಮನೋಹರ್, ಕೃಷ್ಣ ನಾಯ್ಕ ಮತ್ತಿತರರು ಈ ಸಂದರ್ಭ ಸಂಚಾರ ಸುವ್ಯವಸ್ಥೆಯನ್ನು ಕೈಗೊಂಡರು. ಮಾಣಿಯಿಂದ ಬಿ.ಸಿ.ರೋಡ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ಸಮಸ್ಯೆಗೆ ಕಾರಣವಾಗಿತ್ತು. ಸಂಚಾರಿ ಪೊಲೀಸರು ಈ ಕುರಿತು ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದು, ನಿರ್ವಹಣೆ ನಡೆಸುವ ಖಾಸಗಿ ಗುತ್ತಿಗೆದಾರರಿಗೂ ಸೂಚನೆ ನೀಡಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮೇಲ್ಕಾರ್ – ಮಾಣಿ ಹೆದ್ದಾರಿ, ಗುಂಡಿ ಮುಚ್ಚುವ ಕಾಮಗಾರಿ"