ಫರಂಗಿಪೇಟೆ

ಬಿ.ಸಿ.ರೋಡ್ – ಮಂಗ್ಳೂರು ಹೈವೇಯಲ್ಲಿ ದರೋಡೆಗೆ ಸ್ಕೆಚ್: ಇಬ್ಬರ ಬಂಧನ

ಮಾರಿಪಳ್ಳದಲ್ಲಿ ಮಾರಕಾಸ್ತ್ರ ಹಿಡಿದು ದರೋಡೆ ಮಾಡಲು ಸ್ಕೆಚ್ ಹಾಕುತ್ತಾ ನಿಂತಿದ್ದ ಆರು ಮಂದಿಯ ಪೈಕಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

ಮಂಗಳೂರು ತಾಲೂಕಿನ ಮೇಲಂಗಡಿ ನಿವಾಸಿ ಮಹಮ್ಮದ್ ಅರ್ಪಾಜ್ ಮತ್ತು ಆತನ ಸ್ನೇಹಿತ ಮಹಮ್ಮದ್ ಸುಹೈಲ್ ಯಾನೆ ತುಪೈಲ್ ಮಾರಿಪಳ್ಳ ಬಂಧಿತ ಆರೋಪಿಗಳು.

ಶುಕ್ರವಾರ ರಾತ್ರಿ ತುಂಬೆ ಗ್ರಾಮದ ಮಾರಿಪಳ್ಳ ರುದ್ರ ಭೂಮಿಯ ಸಮೀಪ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು ಆರು ಜನರ ತಂಡ ರಾ.ಹೆ.ಯ ಮಾರಿಪಳ್ಳದಲ್ಲಿ ಅನುಮಾನಾಸ್ಪದವಾಗಿ ಕುಳಿತುಕೊಂಡಿದ್ದು, ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಕಾಲ್ಕಿತ್ತರು.

ಇದರಿಂದ ಅನುಮಾನಗೊಂಡ ಪೊಲೀಸರು ಇವರನ್ನು ಬೆನ್ನತ್ತಿದಾಗ ಮಹಮ್ಮದ್ ಅರ್ಪಾಜ್ ಮತ್ತು ಮಹಮ್ಮದ್ ಸುಹೈಲ್ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ತಕ್ಷಣ ಇವರಿಬ್ಬರನ್ನು ತೀವ್ರ ವಿಚಾರಣಗೆ ಗುರಿ ಪಡಿಸಿದಾಗ ಮಾರಿಪಳ್ಳದ ಶಾಕೀರ್ , ನೌಪಾಲ್, ಟಿ.ಶಮೀರ್, ಮತ್ತು ನಿಸಾರ್ ಅವರು ಒಟ್ಟು ಆರು ಮಂದಿ ಮಾರಿಪಳ್ಳ ರೊಟ್ಟಿಗುಡ್ಡೆ ರುದ್ರಭೂಮಿ ಬಳಿ ಒಟ್ಟು ಸೇರಿ ರಾತ್ರಿ ಸಮಯದಲ್ಲಿ ಲಾರಿ ಇತರ ವಾಹನ‌ ಚಾಲಕರ ದರೋಡೆಗೆ ಸಂಚು ರೂಪಿಸಿ ರಸ್ತೆ ಬದಿ ಬಂದು ನಿಂತಿದ್ದರೆಂದು ಪೊಲೀಸರ ವಿಚಾರಣೆಯ ವೇಳೆ ಬಯಲಿಗೆ ಬಂದಿದೆ.

ಇದಕ್ಕಾಗಿ ಬಳಸಲು ತಂದಿದ್ದ ಮೆಣಸಿನ ಹುಡಿ ,ಮಾರಕಾಯುಧ ವನ್ನು ಪೊಲೀಸರು ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳಿಂದ ವಶ ಪಡಿಸಿದ್ದಾರೆ. ತಲೆಮರೆಸಿರುವ ನಾಲ್ವರು ಆರೋಪಿಗಳಿಗಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಎಸ್ಪಿ ರವೀಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ, ಪ್ರೊ. ಐ.ಪಿ.ಎಸ್.ಅಕ್ಷಯ್ ಹೆಚ್.ಹಾಕೆ ಅವರ ನೇತೃತ್ವದಲ್ಲಿ ಗ್ರಾಮಾಂತರ ಎಸ್ ಐ. ಪ್ರಸನ್ನ ಕುಮಾರ್ ರವರು ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ಗಳಾದ ಸುರೇಶ್, ಜಯರಾಮ್, ಜನಾರ್ಧನ, ಅಜಯ್, ಬಸವರಾಜ್, ಮಂಜುನಾಥ, ಪಾಲ್ಗೊಂಡಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.