ತುಂಬೆ ಗ್ರಾಮದ ಯುವಶಕ್ತಿ ಫ್ರೆಂಡ್ಸ್ ಮಜಿ ಅಶ್ರಯದಲ್ಲಿ “ಕೆಸರ್‌ಡೊಂಜಿ ದಿನ”ಕಾರ್ಯಕ್ರಮ ನಡೆಯಿತು.
ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಹಿರಿಯರಾದ ಮೋನಪ್ಪ ಮಜಿ, ತುಂಬೆ ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಮಾಜಿ ಅಧ್ಯಕ್ಷ ಪ್ರವೀಣ್ ತುಂಬೆ, ಕಲಾ ಪೋಷಕ ಸದಾಶಿವ ಡಿ ತುಂಬೆ, ದೇವದಾಸ ಪರ್ಲಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ನೂತನವಾಗಿ ಯುವ ಶಕ್ತಿ ಮಾತೃ ಮಂಡಳಿ ಸಂಘಟನೆಗೆ ಚಾಲನೆ ನೀಡಲಾಯಿತು.
ಸಂಜೆ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಹಿರಿಯರಾದ ಸೋಮಪ್ಪ ಪೂಜಾರಿ, ಕಿರಣ್ ಎಂ ಜಿ ಸ್ಟೋರ್, ಯುವಶಕ್ತಿ ಸಂಘಟನೆಯ ಅಧ್ಯಕ್ಷ ರಂಜಿತ್ ಕುಲಾಲ್, ಗೌರವಾಧ್ಯಕ್ಷ ಮಹಾಬಲ ಮಜಿ, ಮಾತೃ ಮಂಡಳಿಯ ಅಧ್ಯಕ್ಷೆ ಶಾಲಿನಿ ಭಾಸ್ಕರ್ ಉಪಸ್ಥಿತರಿದ್ದರು.