ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮೈದಾನದಲ್ಲಿ ಗುರುವಾರ ಬೆಳಗ್ಗೆ ಬಂಟ್ವಾಳದ ತಿರಂಗ ವಾಹನ ಜಾಥಾ ಕಾರ್ಯಕ್ರಮಕ್ಕೆ ಆರೆಸ್ಸೆಸ್ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್ ಚಾಲನೆ ನೀಡಿದರು.
ವಾಹನಗಳಲ್ಲಿ ಕಲ್ಲಡ್ಕದಿಂದ ಬಿ.ಸಿ.ರೋಡ್ ಮೂಲಕ ಪೊಳಲಿ ದ್ವಾರದೆಡೆ ಸಾಗಿ ಸ್ಪರ್ಶ ಕಲಾ ಮಂದಿರವರೆಗೆ ಜಾಥಾ ನಡೆಯಿತು.
ತಿರಂಗ ವಾಹನ ಜಾಥ ಸಮಿತಿ ಬಂಟ್ವಾಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿರಂಗ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಜೆನ್ ಝೀ ಪೀಳಿಗೆ ದೇಶದ ಭವಿಷ್ಯವಾಗಿದ್ದು, ಶಾರ್ಟ್ ಕಟ್ ಯೋಚನೆ ಬಿಟ್ಟು ದೇಶಕ್ಕಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಹಿತಕ್ಕೆ ಹೋರಾಟ, ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಆದರೆ ಯಾವ ಕಾರಣಕ್ಕೂ ಅಡ್ಡದಾರಿ ಹಿಡಿಯಬಾರದು ಎಂದು ಹೇಳಿದ ಭಟ್, ದೇಶದ ಏಕತೆ, ಅಖಂಡತೆಗೆ ನಾವೆಲ್ಲರೂ ಒಟ್ಟಾಗಬೇಕು, ದೇಶ ಅಖಂಡವಾಗಿ ಉಳಿಯವೇಕು ಎಂದರು.
ಈ ಸಂದರ್ಭ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಮತ್ತು ಸಂಘಪರಿವಾರ ಪ್ರಮುಖರಾದ ಆರ್. ಚೆನ್ನಪ್ಪ ಕೋಟ್ಯಾನ್, ರಾಕೇಶ್ ರೈ ಕಡೆಂಜಿ, ವಿಕಾಸ್ ಪುತ್ತೂರು, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಸುದರ್ಶನ ಬಜ, ಸಂದೇಶ್ ಶೆಟ್ಟಿ ಅರೆಬೆಟ್ಟು, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ ಬಾಳಿಕೆ, ರಾಮದಾಸ್ ಬಂಟ್ವಾಳ ದಿನೇಶ್ ಶೆಟ್ಟಿ ದಂಬೆದಾರ್, ಸಂಪತ್ ಕೋಟ್ಯಾನ್ ಕಡೇಶಿವಾಲಯ, ಹರಿಪ್ರಸಾದ್ ಬಂಟ್ವಾಳ, ಹರೀಶ್ ಶೆಟ್ಟಿ ಪಡು, , ಶ್ರೀಧರ್ ಶೆಟ್ಟಿ ಪುಳಿಂಚ, ಮಾಧವ ಮಾವೆ, ಕಮಲಾಕ್ಷಿ ಪೂಜಾರಿ, ಲಖಿತಾ ಆರ್. ಶೆಟ್ಟಿ, ದಿನೇಶ್ ಭಂಡಾರಿ, ಮೋನಪ್ಪ ದೇವಸ್ಯ, ವಸಂತ ಅಣ್ಣಳಿಕೆ, ರವೀಶ್ ಶೆಟ್ಟಿ ಕರ್ಕಳ, ಯಶೋಧರ ಕರ್ಬೆಟ್ಟು, ಶಿವರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು