ಕರಾವಳಿ ಉತ್ಸವಕ್ಕೆ ತಯಾರಾಗಿದೆ ಮಂಗಳೂರು

www.bantwalnews.com

ಮನರಂಜನಾ ಹಬ್ಬ ಕರಾವಳಿ ಉತ್ಸವಕ್ಕೆ  ಕಡಲ ನಗರಿ ಮಂಗಳೂರು ಸಜ್ಜಾಗುತ್ತಿದೆ. ವಿಶ್ವದ ಪ್ರಖ್ಯಾತ  ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಉತ್ಸವಕ್ಕೆ ತಲೆಬಾಗದವರೇ ಇಲ್ಲ. ಮಂಗಳೂರಿನ ಜನತೆಯು ಅತೀ ಉತ್ಸವದಿಂದ ಸೇರುವ ಮನರಂಜನಾ ಉತ್ಸವ ಇದಾಗಿದ್ದು. ಪ್ರತೀವರ್ಷದಂತೆ ಈ ವರ್ಷವೂ ಕೂಡ ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಹಾಗೂ ಸಾಂಸ್ಕತಿಕ,  ಮನರಂಜನೆಯನ್ನು  ನೀಡುವುದರೊಂದಿಗೆ ಜನರನ್ನು ಆಕರ್ಷಿಸುವ ದೃಷ್ಟಿಯಿಂದ ಮಂಗಳೂರಿನ ಜನತೆಗೆ ಹಬ್ಬದ ಸಿಹಿಯನ್ನು ಹಂಚಲು ಜಿಲ್ಲಾಡಳಿತ ಸಿದ್ದತೆಯನ್ನು ನಡೆಸಿದೆ. ಕದ್ರಿ ಉದ್ಯಾನವನ, ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನ, ಪಣಂಬೂರು ಬೀಚ್‍ಗಳಲ್ಲಿ ವೈವಿಧ್ಯಮ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ಇರಲಿವೆ.
10 ದಿನಗಳ ಪರ್ಯಂತ ನಡೆಯುವ ಕರಾವಳಿ ಉತ್ಸವಕ್ಕೆ ಡಿಸೆಂಬರ್ 22 ರಂದು ಗಣ್ಯರ ಸಹಭಾಗಿತ್ವದೊಂದಿಗೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆಯನ್ನು  ನಡೆಸುವ ಮೂಲಕ ಅದ್ದೂರಿ ಚಾಲನೆ ದೊರೆಯಲಿದೆ.
ಕದ್ರಿ ಉದ್ಯಾನವನದಲ್ಲಿ
ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ ಭಾರತೀಯ  ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಮನರಂಜನಾ ಪ್ರದರ್ಶನವು ಕದ್ರಿ ಉದ್ಯಾನವನದಲ್ಲಿ  ನಡೆಯಲಿದೆ.ದೇಶ-ವಿದೇಶದಲ್ಲಿ ಮನ್ನಣೆಗಳಿಸಿದ ಮೆಗಾ ಮ್ಯಾಜಿಕ್  ಸ್ಟಾರ್  ಕುದ್ರೋಳಿ ಗಣೇಶ್ ಮತ್ತು ತಂಡದಿಂದ ವಿಸ್ಮಯ ಜಾದೂ ಪ್ರದರ್ಶನ,  ಅಂತರಾಷ್ಟ್ರೀಯ ಹಿಂದೂಸ್ಥಾನಿ ಸಂಗೀತ ಮಾಂತ್ರಿಕ ಪದ್ಮಶ್ರೀ ಪುರಸ್ಕøತ ಉಸ್ತಾದ್ ಶಾಹೀದ್ ಪರ್ವೇಜ್ ಪುಣೆಯವರಿಂದ ಸಿತಾರ್ ವಾದನ, ಹಾಗೂ ಮುಂಬಯಿಯ ವೈಭವ್ ಅರೇಕರ್ಸ್ ತಂಡದಿಂದ ಶಿವಂ ನೃತ್ಯ ವೈಭವ ಪ್ರದರ್ಶನ, ಬೆಂಗಳೂರಿನ ಪ್ರಖ್ಯಾತ  ವಾಯಲಿನ್ ಸಹೋದರರು ಖ್ಯಾತಿಯ  ತೇಜಸ್ ಮಂಜುನಾಥ್ ಮತ್ತು ಪ್ರಣವ್ ಮಂಜುನಾಥ್ ವಾಯಲಿನ್ ಜುಗಲ್‍ಬಂಧಿ ನಡೆಯಲಿದೆ.ವಿದ್ಯಾಗಿರಿ ಕುಕ್ಕೆ ಸ್ವಾಮಿ ಖ್ಯಾತಿಯ ಡಾ ವಿದ್ಯಾಭೂಷಣ್ ಮತ್ತು ತಂಡ ಭಕ್ತಿಗೀತೆಗಳ ರಸದೌತಣವನ್ನು ನೀಡಲಿದ್ದಾರೆ.
ಯುವ ಉತ್ಸವ:
ಕದ್ರಿ ಉದ್ಯಾನವನದಲ್ಲಿ ಡಿಸೆಂಬರ್ 29 ರಂದು ಜಿಲ್ಲೆಯ ವಿವಿಧ ಕಾಲೇಜುಗಳ ಯುವ ವಿದ್ಯಾರ್ಥಿಗಳಿಂದ ಯುವ ಉತ್ಸವ ಸಾಂಸ್ಕøತಿಕ ವೈವಿಧ್ಯ ನಡೆಯಲಿರುವುದು. ಜೊತೆಗೆ ಜಿಲ್ಲೆಯ ವಿವಿಧ ಪ್ರಸಿದ್ದ ಗಾಯಕರಿಂದ ಸಂಗೀತ ರಸಮಂಜರಿ ಹಾಗೂ ಕಾರ್ಟೂನ್ ಹಬ್ಬ ಈ ವರ್ಷದ ವಿಶೇಷತೆಯಾಗಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ಬೃಹತ್ ವಸ್ತು ಪ್ರದರ್ಶನ
ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ ತುಳುನಾಡಿನ ಶೈಲಿಯ ವಸ್ತು ಪ್ರದರ್ಶನವು ಕರಾವಳಿ ಉತ್ಸವ ಮೈದಾನದಲ್ಲಿದ್ದು, ಸಾಂಪ್ರದಾಯಿಕ ನೃತ್ಯ ಹಾಗೂ ಜಾನಪದ ನೃತ್ಯದ ಜೊತೆಗೆ ತುಳು ಚಿತ್ರರಂಗದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್‍ರವರ ನಾಟಕದ ಪ್ರದರ್ಶನ ನಡೆಯಲಿಕ್ಕಿದೆ.
ಪಣಂಬೂರು ಕಡಲ ತೀರ ವಿಶಿಷ್ಟ ಆಕರ್ಷಣೆ
ಪಣಂಬೂರು ಕಡಲ ತೀರವು ವಿವಿಧ ಅಲಂಕಾರಗಳಿಂದ  ವಿಶಿಷ್ಟ ಆಕರ್ಷಣೆಯಾಗಲಿದ್ದು ಮುಸ್ಸಂಜೆಯ ಸಮಯದಲ್ಲಿ ಕಡಲ ತೀರಕ್ಕೆ ಹೋಗುವ ಜನತೆಗೆ ಬೀಚ್ ಉತ್ಸವದೊಂದಿಗೆ ವೈವಿಧ್ಯಮಯವಾದ ಕ್ರೀಡೆ, ವಿಭಿನ್ನ ಶೈಲಿಯ ಆಹಾರೋತ್ಸವ ಹಾಗೂ ಸಂಗೀತ ಸ್ಪರ್ಧೆ ವಿಜೇತರಿಂದ ರಸಸಂಜೆ ಕಾರ್ಯಕ್ರಮ ನಡೆಯಲಿರುವುದು.
ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ,ಕರಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮಗಳು ಜನತೆಗೆ ಖುಷಿಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇದರೆ ಜೊತಗೆ ಕ್ರಿಸ್‍ಮಸ್ ಹಬ್ಬವು ಇರುವುದರಿಂದ  ಕರಾವಳಿ ಜನತೆಯ ಖುಷಿ ಇಮ್ಮಡಿಗೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಕ್ರಿಸ್‍ಮಸ್ ಹಬ್ಬದ ರಜೆಯನ್ನು ಸವಿಯಲು ಕರಾವಳಿ ಉತ್ಸವವು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಪ್ರಮುಖ ವೇದಿಕೆಯಾಗಲಿದೆ.
ಕರಾವಳಿ ಉತ್ಸವ ಕಾರ್ಯಕ್ರಮಗಳ ವಿವರ: 
ಡಿಸೆಂಬರ್ 22 ರಂದು ಸಂಜೆ 3.30 ಗಂಟೆಗೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದ ವರೆಗೆ ಮೆರವಣಿಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ನರೆವೇರಿಸಲಿದ್ದಾರೆ ಸಂಜೆ 5.30 ಗಂಟೆಗೆ  ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು  ಅರಣ್ಯ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ  “ಕರಾವಳಿ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಬಹುಭಾಷ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ  ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.
ಕದ್ರಿ ಉದ್ಯಾನವನದಲ್ಲಿ  ನಡೆಯುವ ಕಾರ್ಯಕ್ರಮಗಳು ಇಂತಿವೆ: ಡಿಸೆಂಬರ್ 22 ರಂದು ಸಂಜೆ 6 ಗಂಟೆಗೆ ಪುತ್ತೂರಿನ ವಿದುಷಿ ಶಂಕರಿ ಮೂರ್ತಿ ಬಾಳಿಲ ಹಾಗೂ ತಂಡದಿಂದ ‘ಕರ್ನಾಟಕೀ ಶಾಸ್ತ್ರೀಯ ಗಾಯನ’, ಸಂಜೆ 7.15 ಗಂಟೆಗೆ ಮಂಗಳೂರಿನ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಮತ್ತು ತಂಡ ದಿಂದ ‘ವಿಸ್ಮಯ ಜಾದೂ’ ನಡೆಯಲಿದೆ.
ಡಿಸೆಂಬರ್ 23 ರಂದು ಸಂಜೆ 6 ಗಂಟೆಗೆ ಮುಂಬಯಿನ ವೈಭವ್ ಅರೇಕರ್ಸ್ ಮತ್ತು ತಂಡದಿಂದ ‘ಶಿವಂ ನೃತ್ಯವೈಭವ’ , ಸಂಜೆ 7.45 ಗಂಟೆಗೆ ಪುಣೆಯ ಪದ್ಮಶ್ರೀ ಪುರಸ್ಕøತ ಉಸ್ತಾದ್ ಶಾಹೀದ್ ಪರ್ವೇಜ್ ರಿಂದ ‘ಸಿತಾರ್ ವಾದನ’ ನಡೆಯಲಿದೆ.
ಡಿಸೆಂಬರ್ 24 ರಂದು ಬೆಳಿಗ್ಗೆ 6 ಗಂಟೆಗೆ ಮೂಡಬಿದ್ರೆಯ ಕುಮಾರಿ ಯಶಸ್ವಿನಿ ಮತ್ತು ತಂಡ ದಿಂದ  ‘ಉದಯರಾಗ-ದಾಸ ಕೀರ್ತನೆಗಳು’ , ಬೆಳಿಗ್ಗೆ 7.30 ಗಂಟೆಗೆ ಮಂಗಳೂರಿನ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ಶಿಷ್ಯರಿಂದ ‘ಯೋಗ ಪ್ರದರ್ಶನ,ಕಲರ್ ಥೆರಫಿ’ , ಸಂಜೆ 6 ಗಂಟೆಗೆ ಬೆಂಗಳೂರಿನ ತೇಜಸ್ ಮಂಜುನಾಥ್ ಮತ್ತು ಪ್ರಣವ್ ಮಂಜುನಾಥ್ ರಿಂದ ‘ವಾಯಲಿನ್ ಜುಗಲ್‍ಬಂಧಿ’ , ಸಂಜೆ 7.15 ಗಂಟೆಗೆ  ಮಂಗಳೂರಿನ ಕೀರ್ತನಾ ರಾವ್ ಮತ್ತು ತಂಡದಿಂದ ‘ರಾಗ ಒಂದು ಭಾವ ಹಲವು’ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 25 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಡಾ.ವಿದ್ಯಾಭೂಷಣ ಮತ್ತು ತಂಡದ ವತಿಯಿಂದ ‘ಭಕ್ತಿ ಗೀತೆಗಳು’ , ಸಂಜೆ 7.45 ಗಂಟೆಗೆ ಮಂಗಳೂರಿನ ಉರ್ವ ನಾಟ್ಯಾಲಯ ದಿಂದ ‘ನೃತ್ಯ ರೂಪಕ’, ನಡೆಯಲಿದೆ.
ಡಿಸೆಂಬರ್ 26 ರಂದು ಸಂಜೆ 6 ಗಂಟೆಗೆ ಮುಂಬಾಯಿನ ಧನಂಜಯ್  ಹೆಗ್ಡೆ ಮತ್ತು ತಂಡದಿಂದ ‘ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ’, ಸಂಜೆ 7.15 ಗಂಟೆಗೆ ಬೆಂಗಳೂರಿನ ಸಂಗೀತ ಕಟ್ಟಿ ಮತ್ತು ತಂಡದಿಂದ ‘ಹಿಂದೂಸ್ತಾನಿ ಶಾಸ್ತ್ರೀಯ ಗಾಯನ,ದಾಸವಾಣಿ ಹಾಗೂ ವಚನಗಳು’ ನಡೆಯಲಿದೆ.
ಡಿಸೆಂಬರ್ 27 ರಂದು ಸಂಜೆ 6 ಗಂಟೆಗೆ ಚೆನ್ನೈನ ಪ್ರಪಂಚಮ್ ಎಸ್. ಬಾಲಚಂದ್ರನ್ ಮತ್ತು ತಂಡದಿಂದ ‘ಕರ್ನಾಟಕೀ ಕೊಳಲು ವಾದನ’ , ಸಂಜೆ 7.30 ಗಂಟೆಗೆ ಚೆನ್ನೈನ ನೈವೇಲಿ ಸಂತಾನಗೋಪಾಲನ್ ಮತ್ತು ತಂಡದಿಂದ ‘ಕರ್ನಾಟಕೀ ಶಾಸ್ತ್ರೀಯ ಗಾಯನ’ ನಡೆಯಲಿದೆ.
ಡಿಸೆಂಬರ್ 28 ರಂದು ಸಂಜೆ 5 ರಿಂದ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ‘ಯುವ ಉತ್ಸವ’. ಡಿಸೆಂಬರ್ 29 ಸಂಜೆ 5 ರಿಂದ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ‘ಯುವ ಉತ್ಸವ’ ನಡೆಯಲಿದೆ.
ಡಿಸೆಂಬರ್ 30 ರಂದು ಬೆಳಿಗ್ಗೆ 10.30 ರಿಂದ ‘ಕರಾವಳಿ ಕಾರ್ಟೂನ್ ಹಬ’್ಬ , ಸಂಜೆ 6 ಗಂಟೆಗೆ  ಮಂಗಳೂರಿನ ಉತ್ತಮ್ ಕುಮಾರ್ ಮತ್ತು ತಂಡದಿಂದ ‘ದಾಸವಾಣಿ’ , ಸಂಜೆ 7 ಗಂಟೆಗೆ ಮಂಗಳೂರಿನ ವಾಯ್ಸ್ ಆಫ್ ಮ್ಯೂಸಿಕ್ ‘ ಸಂಗೀತ ರಸಮಂಜರಿ’ , ನಡೆಯಲಿದೆ.
ಡಿಸೆಂಬರ್ 31 ಬೆಳಿಗ್ಗೆ 6 ಗಂಟೆಯಿಂದ ಹುಬ್ಬಳ್ಳಿಯ ಪಂ. ಬಾಲಚಂದ್ರ ನಾಕೋಡ್ ಮತ್ತು ತಂಡ ದಿಂದ ‘ ಉದಯರಾಗ-ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ವಚನಗಳು’ , ಬೆಳಿಗ್ಗೆ 10.30 ರಿಂದ ‘ಕಾರಾವಳಿ ಕಾರ್ಟೂನ್ ಹಬ್ಬ’ , ಸಂಜೆ 6 ಗಂಟೆಯಿಂದ ನವದೆಹಲಿಯ ಭಜನ್ ಸಫೊರಿ,ಅಭಯ ರುಸ್ತುಂ ಸಪೋರಿ ಮತ್ತು ತಂಡದಿಂದ ‘ಸಂತೂರ್ ಜುಗಲ್‍ಬಂದಿ’, ಸಂಜೆ 7 ರಿಂದ ಒರಿಸ್ಸಾ ಅಭಿನ್ನ ಸುಂದರ್ ಗೋಟಿ ಪುವಾ ನೃತ್ಯ ಪರಿಷತ್ ಪುರಿ ಯಿಂದ ‘ಗೋಟಿ ಪುವಾ ನೃತ್ಯ’ ಕಾರ್ಯಕ್ರಮ ನಡೆಯಲಿದೆ.
ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ  ನಡೆಯುವ ಕಾರ್ಯಕ್ರಮಗಳು:
 ಡಿಸೆಂಬರ್ 23 ರಂದು ಸಂಜೆ 6 ಗಂಟೆಯಿಂದ ಮಂಗಳೂರಿನ ಡಾ. ಮಚ್ಚೇಂದ್ರನಾಥ್ ಮತ್ತು ತಂಡದಿಂದ ‘ಸ್ಯಾಕ್ಸೋಫೋನ್ ವಾದನ’, ಸಂಜೆ 7 ಗಂಟೆಯಿಂದ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ‘ತುಳು ನಾಟಕ’ ನಡೆಯಲಿದೆ. ಡಿಸೆಂಬರ್24 ರಂದು ಸಂಜೆ 6 ಗಂಟೆಯಿಂದ ಮಂಗಳೂರಿನ ಸ್ವರಶ್ರೀ ಸಂಗೀತ ವಿದ್ಯಾಲಯದಿಂದ ‘ಭಾವಗೀತೆ ಮತ್ತು ಜಾನಪದ ಗೀತೆಗಳು’ , ಸಂಜೆ 7.30ರಿಂದ ಮಂಗಳೂರಿನ ಸೌರಭ ಸಂಗೀತ ಕಲಾಪರಿóತ್ ನಿಂದ ‘ಭರತನಾಟ್ಯ’ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 25 ರಂದು ಸಂಜೆ 6 ಗಂಟೆಯಿಂದ ಪುತ್ತೂರಿನ ಚಂದ್ರಶೇಖರ ಹೆಗ್ಡೆ ಮತ್ತು ತಂಡದಿಂದ ‘ಸುಗಮ ಸಂಗೀತ’, 7.30 ಗಂಟೆಗೆ ಸುರತ್ಕಲ್ ವಿನಾಯಕ ಯಕ್ಷಗಾನ ಮಂಡಳಿ ವತಿಯಿಂದ ‘ಯಕ್ಷಗಾನ ಬಯಲಾಟ’ ನಡೆಯಲಿದೆ. ಡಿಸೆಂಬರ್ 26 ರಂದು ಸಂಜೆ 6 ಗಂಟೆಯಿಂದ ಜಬ್ಬಾರ್ ಸಮೋ ಹಾಗೂ ಕಲಾವಿದರಿಂದ ‘ತಾಳಮದ್ದಳೆ’, ಸಂಜೆ 8 ಗಂಟೆಯಿಂದ ಮಂಗಳೂರಿನ ಮಾಧ್ಯಮ ಮಿತ್ರರಿಂದ ‘ಕರಾವಳಿ ಸಾಂಸ್ಕøತಿಕ ವೈಭವ’ ನಡೆಯಲಿದೆ.
ಡಿಸೆಂಬರ್ 27 ರಂದು ಸಂಜೆ 6 ಗಂಟೆಯಿಂದ ಮಂಗಳೂರಿನ ಕನ್ನಡ ಬಳಗದಿಂದ ‘ಬಹುಭಾಷ ಕವಿಗೋಷ್ಠಿ’, ಸಂಜೆ 7 ಗಂಟೆಗೆ ಬಲೇ ಚಾ ಪರ್ಕ ಕಲಾವಿದ ದೇವದಾಸ್ ಕಾಪಿಕಾಡ್ ರಿಂದ ‘ತುಳು ಹಾಸ್ಯ ನಾಟಕ’ ನಡೆಯಲಿದೆ. ಡಿಸೆಂಬರ್ 28  ರಂದು ಸಂಜೆ 6 ಗಂಟೆಗೆ ಮಂಗಳೂರಿನ ಗುರುನಾದ ನೃತ್ಯ ಸಂಸ್ಥೆಯಿಂದ ‘ನೃತ್ಯರೂಪಕ-ನೆನಪಾದಳು ಶಕುಂತಲೆ’, ಸಂಜೆ 7 ಗಂಟೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ  ಅಕಾಡೆಮಿಯಿಂದ ‘ದಕ್ಷಿಣ ಕನ್ನಡ ಬ್ಯಾರಿ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 29 ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ವೈವಿಧ್ಯ , 7ರಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಯಿಂದ ‘ ದಕ್ಷಿಣ ಕನ್ನಡ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 30 ರಂದು ಸಂಜೆ 6 ಗಂಟೆಗೆ ಕಿನ್ನಿಗೋಳಿಯ ವಿದುಷಿ ಕುಮಾರಿ ಅನ್ನಪೂರ್ಣ ಶೆಟ್ಟಿ ಮತ್ತು ತಂಡದಿಂದ ‘ಭರತನಾಟ್ಯ ಸಂಭ್ರಮ’, 7ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಯಿಂದ ‘ದಕ್ಷಿಣ ಕನ್ನಡ ತುಳು ಸಾಂಸ್ಕøತಿಕ ವೈವಿಧ್ಯ’ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 31 ರಂದು ಸಂಜೆ 6 ಗಂಟೆಯಿಂದ ರಾಜ್ಯಪ್ರಶಸ್ತಿ ಪುರಸ್ಕøತ ಅಂಧ ಕಲಾವಿದೆ ಕುಮಾರಿ ಕಸ್ತೂರಿ ಮತ್ತುತಂಡದಿಂದ ‘ಸಂಗೀತ ಸೌರಭ’, ಸಂಜೆ 7 ಗಂಟೆಗೆ ಉಡುಪಿಯ ಗುರುರಾಜ್ ಮಾರ್ಪಳ್ಳಿ ಮತ್ತು ತಂಡದಿಂದ ‘ಕನ್ನಡ ನಾಟಕ’ ಪ್ರದರ್ಶನ ನಡೆಯಲಿದೆ.
ಪಣಂಬೂರು ಬೀಚ್ ನಲ್ಲಿ ನಡೆಯುವ ಕಾರ್ಯಕ್ರಮಗಳು:
ಡಿಸೆಂಬರ್ 29 ರಂದು ಬೆಳಿಗ್ಗೆ 9 ಕ್ಕೆ ಬೀಚ್ ವಾಲಿಬಾಲ್,ಬೆಳಿಗ್ಗೆ 9.30 ಕ್ಕೆ ಬೀಚ್ ತ್ರೋಬಾಲ್, ಸಂಜೆ 5 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆ, ಸಂಜೆ 5.30 ಕ್ಕೆ ಆಹಾರೋತ್ಸವ, ಸಂಜೆ 6 ಗಂಟೆಗೆ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಬೀಚ್ ವಾಲಿಬಾಲ್,ಬೆಳಿಗ್ಗೆ 9.30 ಕ್ಕೆ ಬೀಚ್ ತ್ರೋಬಾಲ್, ಸಂಜೆ 4 ಕ್ಕೆ ಆಹಾರೋತ್ಸವ, ಸಂಜೆ 5 ಕ್ಕೆ ಸಂಗೀತ ಸ್ಪರ್ಧೆ ವಿಜೇತರಿಂದ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 31 ಬೆಳಿಗ್ಗೆ 5 ಕ್ಕೆ ಯೋಗ, ಬೆಳಿಗ್ಗೆ 6 ಕ್ಕೆ ಉದಯರಾಗ, ಬೆಳಿಗ್ಗೆ 10 ಕ್ಕೆ ಮರಳಿನ ಆಕೃತಿ ರಚನೆ, ಬೆಳಿಗ್ಗೆ 10.30 ಕ್ಕೆ ಸ್ಟ್ಯಾಂಡ್‍ಅಪ್ ಪೆಡ್ಡಿಂಗ್, ಸಂಜೆ 3 ಕ್ಕೆ ಸರ್ಪಿಂಗ್ ಪ್ರದರ್ಶನ, ಸಂಜೆ 4ಕ್ಕೆ ಆಹಾರೋತ್ಸವ, 4.30ಕ್ಕೆ ಬ್ಯಾಂಡ್ ಕಾರ್ಯಕ್ರಮ, ಸಂಜೆ 5.30ಕ್ಕೆ ಕರಾವಳಿ ಉತ್ಸವ ಸಮಾರೋಪ ಸಮಾರಂಭ, ಸಂಜೆ 6.30ಕ್ಕೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಕ್ರೀಡಾಪಂದ್ಯಾಟದ ವಿವರ: ಡಿಸೆಂಬರ್ 23 ರಂದು ಬೆಳಗ್ಗೆ 9 ಗಂಟೆಗೆ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾಟ, ಡಿಸೆಂಬರ್ 23 ರಂದು ಬೆಳಿಗ್ಗೆ 9 ಕ್ಕೆ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ತ್ರೋಬಾಲ್ ಪಂದ್ಯಾಟ, ಡಿಸೆಂಬರ್ 26 ರಂದು ಬೆಳಿಗ್ಗೆ 9 ಕ್ಕೆ ಫ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಕಿಯರಿಗೆ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ (ಪುರುಷರಿಗೆ) ನೆಟ್‍ಬಾಲ್  ಪಂದ್ಯಾಟ ನಡೆಯಲಿದೆ.
ಡಿಸೆಂಬರ್ 31 ರಂದು ಸಂಜೆ 5.30ಕ್ಕೆ ಪಣಂಬೂರು ಕಡಲ ತೀರದಲ್ಲಿ ಸಮಾರೋಪ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಸಮಾರೋಪ ಭಾಷಣ ಮಾಡಲಿದ್ದಾರೆ.ಮಂಗಳೂರು ಉತ್ತರ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅಧ್ಯಕ್ಷತೆ ವಹಿಸಲಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕರಾವಳಿ ಉತ್ಸವಕ್ಕೆ ತಯಾರಾಗಿದೆ ಮಂಗಳೂರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*