ವಾಹನ ಚಾಲಕರು ಎಷ್ಟು ಜಾಗ್ರತೆ ಇದ್ದರೂ ಅಪಘಾತಗಳು ನಡೆಯುವ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ಮತ್ತೊಂದು ಅಪಘಾತ ಗುರುವಾರ ಬೆಳಗ್ಗೆ ಸಂಭವಿಸಿದೆ. ಸಿಟಿ ಬಸ್ಸೊಂದು ಕಂಟೈನರ್ ಗೆ ಗುದ್ದಿದ ಪರಿಣಾಮ, ಕಂಟೈನರ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಮಹಿಳೆ ಕವಿತಾ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಟ್ಟು 14 ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾಹೀರಾತು
ಬೆಳಗ್ಗೆ ಸುಮಾರು ಏಳೂವರೆ ಗಂಟೆಯ ವೇಳೆ ಅಪಘಾತ ಸಂಭವಿಸಿದೆ. ನಂತೂರು ಜಂಕ್ಷನ್ ಹಲವು ಅಪಘಾತಗಳಿಗೆ ಸಾಕ್ಷಿಯಾಗಿದ್ದು, ಅದರ ಸಾಲಿಗೆ ಗುರುವಾರದ ದುರಂತ ಘಟನೆ ಸೇರಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಂತೂರಿನಲ್ಲಿ ಭೀಕರ ಅಪಘಾತ, ಮಹಿಳೆ ಸಾವು, 14 ಮಂದಿಗೆ ಗಾಯ"