ವಿಕಾಸದಿಂದ ಗ್ರಾಮ ವಿಕಾಸ. ಗ್ರಾಮಗಳಲ್ಲಿ ಸಂಸ್ಕಾರಯುತವಾಗಿ ಸಮಾಜ ಪರಿವರ್ತನೆ ಹೊಂದಿದಾಗ ರಾಷ್ಟ್ರ ವಿಕಾಸವಾಗಲು ಸಾಧ್ಯ. ಧರ್ಮದ ಒಡಲು ಸತ್ಯ ಧರ್ಮವನ್ನು ಅರಿತವನು ಬದುಕು ನಿರ್ಮಾಣದ ಬಗ್ಗೆ ತಿಳಿದಿರುತ್ತಾನೆ. ಧರ್ಮ ಎನ್ನುವುದು ಚಲನಾಶೀಲವಾದುದು. ಭಾರತ ದೇಶದ ಹಿರಿಮೆಯ ಒಳ ತಿರುಳುಗಳೇ ಆಧ್ಯಾತ್ಮ. ಅಜ್ಞಾನದ ಅಂಧಕಾರವನ್ನು ಸುಜ್ಞಾನದ ಬೆಳಕಿನಿಂದ ನೀಗಿಸಲು ಸಾಧ್ಯ ಎಂದು ಪರಮಪೂಜ್ಯ ಒಡಿಯೂರು ಶ್ರೀ ಗಳು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭ ಯೋಜನೆಯ ಪ್ರಧಾನ ಸಂಚಾಲಕರು ಹಾಗೂ ಬೆಳ್ತಂಗಡಿ ತಾಲೂಕಿನ ಘಟಸಮಿತಿ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳ್ತಂಗಡಿ ತಾಲೂಕಿನ ನವೀನ್‌ರವರು ಮಹಿಳಾ ಶೋಷಣೆ ಯಾರಿಂದ? ಎಂಬ ವಿಚಾರದ ಬಗ್ಗೆ ವಿಷಯ ಮಂಡಿಸಿದರು. ಸೇವಾದೀಕ್ಷಿತೆ ಗಿರಿಜಾ ನಾವರ ತಿಂಗಳ ಚಟುವಟಿಕೆಯನ್ನು ನಿರ್ವಹಿಸಿದರು. ಶ್ಲೋಕ ಮತ್ತು ಅಮೃತ ವಚನವನ್ನು ಗಿರಿಜಾ ಗೇರುಕಟ್ಟೆ ನಿರ್ವಹಿಸಿದರು. ಬಂಟ್ವಾಳ ತಾಲೂಕಿನ ಸಿಬ್ಬಂದಿಗಳು ಭಗವದ್ಗೀತೆ ಅಭ್ಯಾಸ, ಪ್ರಾಣಾಯಾಮ, ಧ್ಯಾನ, ಹಾಗೂ ಭಜನೆಯನ್ನು ನೆರವೇರಿಸಿಕೊಟ್ಟರು.
ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿಯಾದ ಸದಾಶಿವ ಅಳಿಕೆಯವರು ಯೋಜನೆಯ ಮಾಸಿಕ ವರದಿ ಮಂಡಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಟಿ. ತಾರಾನಾಥ ಕೊಟ್ಟಾರಿಯವರು ಯೋಜನೆಯ ಮಾಹಿತಿಯನ್ನು ನೀಡಿದರು.
ಬೆಳ್ತಂಗಡಿ ತಾಲೂಕಿನ ವಿಸ್ತರಣಾಧಿಕಾರಿ ಯಶೋಧರ್ ಸಾಲ್ಯಾನ್ ಸ್ವಾಗತಿಸಿ, ಸೇವಾದೀಕ್ಷಿತೆ ಪುಷ್ಪಲತಾ ಕಾರ್ಯಕ್ರಮ ನಿರ್ವಹಿಸಿದರು. ರತ್ನಾಕರ್ ವಂದಿಸಿದರು. ವಿಟ್ಲ ಮಂಡಲದ ಪದಾಧಿಕಾರಿಗಳು ಹಾಗೂ ಯೋಜನೆಯ ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ ಹಾಗೂ ವಿಸ್ತರಣಾಧಿಕಾರಿಗಳಾದ ನವೀನ್ ಶೆಟ್ಟಿ ಮಂಗಳೂರು, ಮುರಳೀಧರ್ ಕಾರ್ಕಳ ಉಪಸ್ಥಿತರಿದ್ದರು.
Be the first to comment on "ಅಜ್ಞಾನದ ಅಂಧಾಕಾರಕ್ಕೆ ಸುಜ್ಞಾನವೇ ಬೆಳಕು-ಒಡಿಯೂರು ಶ್ರೀ"